ಹೀಗೆ ಮಾಡಿದ್ರೆ ಭಾರತ ಬಿಟ್ಟು ಹೋಗ್ತೇವೆ ಎಂದು ಎಚ್ಚರಿಸಿದ ವಾಟ್ಸ್ಆ್ಯಪ್! ಅಷ್ಟಕ್ಕೂ ಸರ್ಕಾರದ ಜೊತೆಗಿನ ಜಟಾಪಟಿ ಏನು?

ಮೆಟಾ ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಸೇವೆಯನ್ನ ಒದಗಿಸುತ್ತಿದೆ. ಆ ಮೂಲಕ ಬಳಕೆದಾರರನ್ನು ಸುರಕ್ಷಿತವಾಗಿರಿಸಿದೆ. ಆದರೆ ಮುಂದಿನ ದಿನಗಳಲ್ಲಿ ಚಾಟ್ ಎನ್ಕ್ರಿಪ್ಟ್ ಅನ್ನು ಭೇದಿಸಲು ಹೊರಟರೆ ಭಾರತದಿಂದ ನಿರ್ಗಮಿಸುವುದಾಗಿ ದೆಹಲಿ ಹೈಕೋರ್ಟ್ಗೆ ವಾಟ್ಸ್ಆ್ಯಪ್ ತಿಳಿಸಿದೆ.

ಭಾರತ ಸರ್ಕಾರ ಮತ್ತು ವಾಟ್ಸ್ಆ್ಯಪ್ ಗೌಪ್ಯತೆಯ ದೃಷ್ಟಿಯ ವಿಚಾರವಾಗಿ ಹೋರಾಡುತ್ತಿದೆ. ಅದರಲ್ಲೂ ಚಾಟ್, ಕರೆ, ವೀಡಿಯೋ ಕರೆಗಳನ್ನು ಸುರಕ್ಷಿತವಾಗಿರಿಸಲು ವಾಟ್ಸ್ಆ್ಯಪ್ ಹೋರಾಡುತ್ತಲೇ ಬಂದಿದೆ. ಆದರೆ ಸರ್ಕಾರ ಸಂದೇಶದ ಮೂಲವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ದೆಹಲಿ ಕೋರ್ಟ್ ಮೊರೆ ಹೋಗಿದೆ.

ಮೆಟಾ-ಮಾಲೀಕತ್ವದ ವಾಟ್ಸ್ಆ್ಯಪ್ ಕೋರ್ಟ್ನಲ್ಲಿ ವಾಧಿಸಲು ತೇಜಸ್ ಕರಿಯಾ ಅವರನ್ನು ನೇಮಕ ಮಾಡಿದೆ. ಅವರು ಎನ್ಕ್ರಿಪ್ಟ್ ಅನ್ನು ಭೇದಿಸಲು ಮುಂದಾದರೆ ಕಾನೂನನ್ನು ಅನುಸರಿಸುವ ಬದಲು ವಾಟ್ಸ್ಆ್ಯಪ್ ದೇಶಬಿಟ್ಟು ನಿರ್ಗಮಿಸುವುದಾಗಿ ತಿಳಿದ್ದಾರೆ.

ಜೊತೆಗೆ ವಾಟ್ಸ್ಆ್ಯಪ್ ಹಲವು ವೈಶಿಷ್ಟ್ಯ ಜೊತೆಗೆ ಸುರಕ್ಷಿತವಾಗಿರುವುದರಿಂದ ಕೋಟ್ಯಾಂತರ ಜನರು ಬಳಸುತ್ತಿದ್ದಾರೆ. ಯುಪಿಐ ಪಾವತಿ ಸೇವೆ ಒದಗಿಸಿರುವ ದೇಶಗಳಲ್ಲಿ ವಾಟ್ಸ್ಆ್ಯಪ್ 400 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಹೇಳಿದ್ದಾರೆ.

ಏನಿದು ಜಟಾಪಟಿ?

ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿಯಲ್ಲಿ ವಾಟ್ಸ್ಆ್ಯಪ್ ಮತ್ತು ಇನ್ನಿತರ ಮೆಸೇಜಿಂಗ್ ಆ್ಯಪ್ಗಳ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ಸಲುವಾಗಿ ಎನ್ಕ್ರಿಪ್ಟ್ ನಿಯಮ ಸಡಿಲಗೊಳಿಸುವ ಅಗತ್ಯವಿದೆ ಎಂದು ಭಾರತ ಸರ್ಕಾರ ಹೇಳಿಕೊಂಡು ಬಂದಿದೆ. ಆದರೆ ವಾಟ್ಸ್ಆ್ಯಪ್ ಬಳಕೆದಾರರಿಗೆ ಸುರಕ್ಷಿತವಾದ ವೈಶಿಷ್ಯದ ಜೊತೆಗೆ ಸೇವೆಯನ್ನು ನೀಡುತ್ತಿರುವಾಗ ಎನ್ಕ್ರಿಪ್ಟ್ ಸಡಿಲಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದೆ. ಜೊತೆಗೆ ಭಾರತೀಯ ಐಟಿ ನಿಯಮದ ಪ್ರಕಾರ ಮೆಟಾ ಒಡೆತನದ ವಾಟ್ಸ್ಆ್ಯಪ್ ಹೋರಾಡುತ್ತಿದೆ. ಮಾತ್ರವಲ್ಲದೆ ಭಾರತೀಯ ಸಂವಿಧಾನದ ಅಡಿಯಲ್ಲಿ ಬಳಕೆದಾರರ ಗೌಪ್ಯತೆ ಉಲ್ಲಂಘಿಸುವುದು ಸರಿಯಲ್ಲ ಎಂದು ಹೇಳಿದೆ.

Scroll to Top