ಕಾಪು: ಕೆಲಸ ಅರಸಿಕೊಂಡು ಬಂದಿದ್ದ ಯುವತಿ ನಾಪತ್ತೆ

ಕಾಪು: ಹೊನ್ನಾವರದಿಂದ ಉದ್ಯಾವರಕ್ಕೆ ಸಹೋದರಿಯ ಜತೆಗೆ ಕೆಲಸ ಅರಸಿಕೊಂಡು ಬಂದು, ರೂಮ್‌ನಲ್ಲಿ ಉಳಿದು ಕೊಂಡಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ಬಂದಿದೆ.

ಹೊನ್ನಾವರ ತಾಲೂಕು ಕಾಸರಕೋಡ ಮಲಬಾರ ಕೇರಿ ನಿವಾಸಿ ಪ್ರೇಮಾ (25) ಎಂಬಾಕೆ ತನ್ನ ತಂಗಿ ದಿವ್ಯಾ ಜತೆ ಸೇರಿ ಎ. 15ರಂದು ಉದ್ಯಾವರ ಪಿತ್ರೋಡಿಯ ಸಿಗಡಿ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಾಗಿ ಬಂದಿದ್ದು, ಬಳಿಕ ಸ್ಥಳೀಯ ರೂಮ್‌ ಒಂದರಲ್ಲಿ ಉಳಿದುಕೊಂಡಿದ್ದರು. ಅದೇ ದಿನ ಸಂಜೆ 6.30ಕ್ಕೆ ಅಕ್ಕ ಪ್ರೇಮಾ, ತಂಗಿಯ ಬಳಿ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ಬಳಿಕ ರೂಮ್‌ಗಾಗಲೀ, ಮನೆಗಾಗಲೀ ವಾಪಸು ಬಂದಿಲ್ಲ ಎಂದು ಆಕೆಯ ಸಹೋದರ ಮಂಜುನಾಥ್‌ ನಾಗೇಶ್‌ ಅಂಬಿಗ ಕಾಪು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಯುವತಿ 5 ಅಡಿ ಎತ್ತರ, ಗೋಧಿ ಮೈ ಬಣ್ಣ ಹೊಂದಿದ್ದಾರೆ. ಕೆಂಪು ಬಣ್ಣದ ಚೂಡಿದಾರ ಟಾಪ್‌ ಮತ್ತು ಕಪ್ಪು ಬಣ್ಣದ ಲೆಗ್ಗಿನ್ಸ್‌ ಪ್ಯಾಂಟ್‌ ಧರಿಸಿದ್ದು ಕನ್ನಡ, ಕೊಂಕಣಿ, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಯಾರಾದರೂ ಗಮನಿಸಿದಲ್ಲಿ ಕಾಪು ಪೊಲೀಸ್‌ ಠಾಣೆ 0820-2551033 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

You cannot copy content from Baravanige News

Scroll to Top