ಮಲ್ಪೆ ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಬಾಲಕನ ರಕ್ಷಣೆ

ಮಲ್ಪೆ: ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿ ಬಾಲಕನನ್ನು ಇಲ್ಲಿನ ಜೀವ ರಕ್ಷಕರು ರಕ್ಷಣೆ ಮಾಡಿರುವ ಘಟನೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಡೆದಿದೆ.

ಚಿಕ್ಕಬಳ್ಳಾಪುರದ ಶ್ರೇಯಸ್‌ (12)ನನ್ನು ರಕ್ಷಿಸಲಾಗಿದ್ದು, ಆತ ತನ್ನ ಕುಟುಂಬದ ಸದಸ್ಯರೊಂದಿಗೆ ಬೀಚ್‌ಗೆ ಬಂದಿದ್ದ.

ಇಲ್ಲಿನ ಜೀವರಕ್ಷಕರ ಕಣ್ಣು ತಪ್ಪಿಸಿ ಈಜಲು ಮುಂದಾಗಿದ್ದ ಈತ ಸಮುದ್ರದಲೆಗೆ ಸಿಲುಕಿ ಕೊಚ್ಚಿ ಹೋಗಿದ್ದ ಎನ್ನಲಾಗಿದೆ. ತತ್‌ಕ್ಷಣ ನೀರಿಗೆ ಧುಮುಕಿ ಈಜುತ್ತಾ ಧಾವಿಸಿ ಬಂದ ಜೀವರಕ್ಷಕರು ಬಾಲಕನನ್ನು ರಕ್ಷಿಸಿ ಉಪಚರಿಸಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಡಲು ಅಬ್ಬರ:
ಮಂಗಳವಾರ ಕಡಲ ಅಬ್ಬರದಿಂದಾಗಿ ನೀರಿನ ಒತ್ತಡವು ಜಾಸ್ತಿಯಾಗಿತ್ತು. ಬೆಳಗ್ಗೆ ಯಾವುದೇ ಜಲಸಾಹಸ ಕ್ರೀಡೆಗಳು ನಡೆದಿಲ್ಲ. ಜೀವ ರಕ್ಷಕರು ತೀವ್ರ ನಿಗಾ ವಹಿಸುತ್ತಿದ್ದು ಯಾರನ್ನು ಕ‌ಡಲಿಗಿಳಿಯಲು ಬಿಡುತ್ತಿರಲಿಲ್ಲ. ಈ ಮಧ್ಯೆ ಬಾಲಕ ಜೀವರಕ್ಷಕರ ಕಣ್ಣುತಪ್ಪಿಸಿ ಈಜಲು ಮುಂದಾಗಿದ್ದಾನೆ ಎನ್ನಲಾಗಿದೆ.

You cannot copy content from Baravanige News

Scroll to Top