ಏಪ್ರಿಲ್ ತಿಂಗಳಲ್ಲಿ ದಾಖಲೆಯ 2.10 ಲಕ್ಷ ಕೋಟಿ ರೂ. ಜಿಎಸ್ ಟಿ‌ ಸಂಗ್ರಹ

ನವದೆಹಲಿ : ಏಪ್ರಿಲ್ ತಿಂಗಳಲ್ಲಿ ದಾಖಲೆಯ 2.10 ಲಕ್ಷ ಕೋಟಿ ರೂ.ನಷ್ಟು ಜಿಎಸ್ ಟಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು ಬುಧವಾರ ಮಾಹಿತಿ ನೀಡಿದೆ.

ಇದೇ ಮೊದಲ ಬಾರಿಗೆ ಜಿಎಸ್ ಟಿ ಸಂಗ್ರಹ 2 ಲಕ್ಷ ಕೋಟಿ ರೂ ಮುಟ್ಟಿದ್ದು, ಆರ್ಥಿಕ ಬೆಳವಣಿಗೆ ಮತ್ತು ಆಡಳಿತ ಕ್ಷಮತೆ ಹೆಚ್ಚಾಗಿರುವುದಕ್ಕೆ ಏರಿಕೆಯಾದ ತೆರಿಗೆ ಸಂಗ್ರಹ ಉದಾಹರಣೆ ಎನ್ನಬಹುದು. ಇನ್ನು ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ 15,978 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ.

ಏಪ್ರಿಲ್ ತಿಂಗಳಲ್ಲಿ ಪ್ರತಿ ರಾಜ್ಯದಲ್ಲಿ ಸಂಗ್ರಹವಾಗಿರುವ ಜಿಎಸ್ ಟಿ ವಿವರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಬಾರಿ ಸಿಜಿಎಸ್ ಟಿ 43,846 ಕೋಟಿ ರೂ., ಎಸ್ ಜಿಎಸ್ ಟಿ 53,538 ಕೋಟಿ ರೂ., ಐಜಿಎಸ್ ಟಿ 99,623 ಕೋಟಿ ರೂ ಹಾಗೂ ಸೆಸ್ 13,260 ಕೋಟಿ ರೂ. ಸಂಗ್ರಹವಾಗಿದೆ.

You cannot copy content from Baravanige News

Scroll to Top