ಕಾರ್ಕಳ: ಬೈಕ್ ಗೆ ರಿಕ್ಷಾ ಡಿಕ್ಕಿ: ಸವಾರನಿಗೆ ಗಂಭೀರ ಗಾಯ

ಕಾರ್ಕಳ: ತಾಲೂಕಿನ ಬಜಗೋಳಿ ಸಮೀಪದ ಮುಡಾರು ಗ್ರಾಮದ ಆಲ್‌ಪಟ್ಟ ಸೇತುವೆ ಬಳಿ ರಿಕ್ಷಾ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡ ಬೈಕ್ ಸವಾರ ಕೆರ್ವಾಶೆ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಶಿವರಾಜ್ ಎಂದು ತಿಳಿದುಬಂದಿದ್ದು, ಅವರು ಬಜಗೋಳಿ ಕಡೆ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದರಿಕಾಕ್ಕೆ ಆಲ್‌ದಟ್ಟ ಸೇತುವೆ ಬಳಿಯ ಅಪಾಯಕಾರಿ ತಿರುವಿನಲ್ಲಿ ಈ ಅಪಘಾತ ನಡೆದಿದೆ.

ಬೈಕ್ ಸವಾರ ಶಿವರಾಜ್ ಅವರ ತಲೆ ಹಾಗೂ ಕೈಕಾಲಿಗೆ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜಗೋಳಿ ಮುಡಾರು ರಸ್ತೆಯ ಆಲ್‌ಟ್ಟ ಕಿರು ಸೇತುವೆಯ ಬಳಿಯ ರಸ್ತೆ ಅತ್ಯಂತ ಅಪಾಯಕಾರಿ, ತಿರುವಿನಿಂದ ಕೂಡಿದ ರಸ್ತೆಯಾಗಿದೆ. ಈ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು ಅಧಿಕಾರಿಗಳು ಯಾವುದೇ ರೀತಿಯ ಮುನ್ಸೂಚನಾ ಫಲಕಗಳನ್ನು ಅಳವಡಿಸದೇ ನಿರ್ಲಕ್ಷ್ಯತೋರಿದ್ದಾರೆ.

ಆದ್ದರಿಂದ ಇಂತಹ ಅಪಘಾತಗಳು ನಡೆಯದಂತೆ ಎರಡು ಬದಿಯಲ್ಲಿ ಮುನ್ನೆಚ್ಚರಿಕೆ ಫಲಕವನ್ನು ಅಳವಡಿಸಬೇಕೆಂದು ಸಮಾಜ ಸೇವಕ ಬಜಗೋಳಿ ದಿಡಿಂಬಿರಿ ಸುರೇಶ್ ದೇವಾಡಿಗ ಆಗ್ರಹಿಸಿದ್ದಾರೆ.

You cannot copy content from Baravanige News

Scroll to Top