ಗಂಡನ ಕೈ, ಕಾಲು ಕಟ್ಟಿ ಎದೆ ಮೇಲೆ ಕೂರುತ್ತಿದ್ದ ಹೆಂಡತಿ.. ಸಿಗರೇಟ್ನಿಂದ ಸುಟ್ಟು ಹೇಗೆಲ್ಲ ಟಾರ್ಚರ್ ಕೊಡ್ತಿದ್ದಳು?

ಲಕ್ನೋ : ಹೆಂಡತಿ ತನ್ನ ಗಂಡನ ಕೈ, ಕಾಲುಗಳನ್ನು ಕಟ್ಟಿ ಮನೆಯಲ್ಲಿ ಕೂಡಿ ಹಾಕಿ ಸಿಗರೇಟ್ನಿಂದ ಸುಟ್ಟು ಹತ್ಯೆ ಮಾಡಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ನಗರದಲ್ಲಿ ನಡೆದಿದೆ.

ಬಿಜ್ನೋರ್ ನಗರದ ನಿವಾಸಿ ಮನನ್ ಜೈದಿ ಚಿತ್ರಹಿಂಸೆಗೆ ಒಳಗಾದ ಗಂಡ. ಈತನಿಗೆ ಟಾರ್ಚರ್ ಕೊಟ್ಟ ಹೆಂಡತಿ ಮೆಹರ್ ಜಹಾನ್. ಈ ಇಬ್ಬರು ದಂಪತಿಯಾಗಿದ್ದಾರೆ.

ಹೆಂಡತಿಯ ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಗಂಡನಿಗೆ ಮಾದಕ ವಸ್ತುವನ್ನು ನೀಡಿ ಕೈ, ಕಾಲುಗಳನ್ನು ಕಟ್ಟಿ ಹಾಕುತ್ತಿದ್ದಳು. ಬಳಿಕ ಗಂಡನ ಮೈ ಮೇಲಿನ ಬಟ್ಟೆಗಳನ್ನ ಬಿಚ್ಚಿ ಎದೆ ಮೇಲೆ ಕುಳಿತು ಕತ್ತು ಹಿಸುಕುತ್ತಿದ್ದಳು. ಚಾಕುವಿನಿಂದ ಎಲ್ಲೆಂದರಲ್ಲಿ ಕುಯ್ಯುತ್ತಿದ್ದಳು. ಇದರಿಂದ ವ್ಯಕ್ತಿಯ ಖಾಸಗಿ ಅಂಗಗಳಿಗೂ ಗಾಯಗಳಾಗಿವೆ. ಹೆಂಡತಿ ಸಿಗರೇಟ್ ಸೇದುತ್ತ ವಿಕೃತಿ ಮೆರೆಯುತ್ತಾ ಗಂಡನಿಗೆ ಎಲ್ಲೆಂದರಲ್ಲಿ ಸಿಗರೇಟ್ನಿಂದ ಸುಡುತ್ತಿದ್ದಳು ಎಂದು ಹೇಳಲಾಗಿದೆ.

ಹೆಂಡತಿ ಟಾರ್ಚರ್ ನೀಡುತ್ತಿದ್ದ ದೃಶ್ಯವೆಲ್ಲ ಮನೆಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋಗಳನ್ನು ಗಂಡ ಪೊಲೀಸರಿಗೆ ನೀಡಿದ್ದಾನೆ. ಪತ್ನಿ ಅಮಲು ಪದಾರ್ಥ ನೀಡಿ, ತನ್ನ ಕೈಕಾಲು ಕಟ್ಟಿ ಚಿತ್ರಹಿಂಸೆ ನೀಡುತ್ತಿದ್ದಳು ಎಂದು ಈ ಹಿಂದೆಯು ಪೊಲೀಸರಿಗೆ ದೂರು ನೀಡಿದ್ದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಆವಾಗ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.

ಪತ್ನಿಯ ವಿವಾಹೇತರ ಸಂಬಂಧಕ್ಕೆ ಪತಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಈ ರೀತಿ ಟಾರ್ಚರ್ ಕೊಟ್ಟಿದ್ದಾಳೆ ಎಂದು ಹೇಳಲಾಗಿದೆ. ಅಲ್ಲದೇ ಮಹಿಳೆ ಮಾಟ, ಮಂತ್ರಗಳಿಂದ ಗಂಡನಿಗೆ ಹೀಗೆ ಮಾಡುತ್ತಿದ್ದಳು ಎಂದು ಕೂಡ ಹೇಳಲಾಗುತ್ತಿದೆ. ಬಿಜ್ನೋರ್ ನಗರದ ಠಾಣೆಯಲ್ಲಿ ಕೇಸ್ ದಾಖಲು ಆಗಿದ್ದು ಪೊಲೀಸರು ಮಹಿಳೆಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

You cannot copy content from Baravanige News

Scroll to Top