ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

ಉಡುಪಿ : ಅಮಾವಾಸ್ಯೆ ಪ್ರಯುಕ್ತ ಸಮುದ್ರದ ಅಲೆಗಳ ಆರ್ಭಟ ಅಧಿಕವಾಗಿದೆ.

ಈ ಕಾರಣದಿಂದ ಮಲ್ಪೆಯ ಕಡಲತೀರದಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಹಾಗೂ ಸೋಮವಾರ ದಿನಪೂರ್ತಿ ವಾಟರ್‌ ಗೇಮ್ಸ್‌ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಪ್ರಸ್ತುತ ಪ್ರವಾಸಿಗರ ಸಂಖ್ಯೆ ಅಧಿಕಗೊಂಡಿದ್ದು, ವಾಟರ್‌ಗೆàಮ್ಸ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದರು. ಮಂಗಳವಾರವೂ ಸಮುದ್ರದ ಅಲೆಗಳು ಹೆಚ್ಚಿದ್ದರೆ ವಾಟರ್‌ ಗೇಮ್ಸ್‌ ಸ್ಥಗಿತಗೊಳಿಸಲು ಸಂಬಂಧಪಟ್ಟ ಸಂಸ್ಥೆ ಉದ್ದೇಶಿಸಿದೆ.

ಸಮುದ್ರದ ಅಲೆಗಳು ಸೋಮವಾರ ಕಡಲತೀರದಲ್ಲಿರುವ ಕುಳಿತುಕೊಳ್ಳುವ ಸ್ಥಳ (ಹಟ್‌)ದತ್ತ ಬಂದಿದ್ದವು. ಸೈಂಟ್‌ ಮೇರಿಸ್‌ಗೆ ಪ್ರವಾಸಿಗರನ್ನು ಕೊಂಡೊಯ್ಯುವ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಪ್ರವಾಸಿಗರ ಹಿತದೃಷ್ಟಿಯಿಂದ ಸೋಮವಾರ ಗೇಮ್ಸ್‌ಗಳನ್ನಷ್ಟೇ ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದೆ.

You cannot copy content from Baravanige News

Scroll to Top