ಮಲ್ಪೆ ಬೀಚ್ ನಲ್ಲಿ ನಾಳೆಯಿಂದ ಸೆ.15ರ ವರೆಗೆ ಪ್ರವಾಸಿ ಬೋಟ್‌ ಚಟುವಟಿಕೆ ಸ್ಥಗಿತ

ಮಲ್ಪೆ, ಮೇ. 15: ನಾಳೆಯಿಂದ ಸೆ.15ರ ವರೆಗೆ ಮಲ್ಪೆ ಬೀಚ್‌, ಸೀವಾಕ್‌ ಪ್ರದೇಶದಲ್ಲಿ ನಡೆಸುವ ಪ್ರವಾಸೀ ಬೋಟ್‌ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ.

ಬೀಚ್‌, ಸೀವಾಕ್‌ ಪ್ರದೇಶದಲ್ಲಿ ನಡೆಸುವ ಪ್ರವಾಸೀ ಬೋಟ್ ಚಟುವಟಿಕೆಯೊಂದಿಗೆ ಸೈಂಟ್‌ ಮೆರೀಸ್‌ ದ್ವೀಪಕ್ಕೆ ತೆರಳುವ ಪ್ರವಾಸೀ ಬೋಟ್‌ ಚಟುವಟಿಕೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಹಾರ್ಬರ್‌ ಕ್ರಾಫ್ಟ್ ನಿಯಮಗಳ ಅನುಸಾರವಾಗಿ 16ರಿಂದ ಸೆ. 15ರ ವರೆಗೆ ಪ್ರವಾಸಿ ಬೋಟ್‌ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂದು ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ಹೊರಡಿಸಿದೆ.

You cannot copy content from Baravanige News

Scroll to Top