ಬೆಂಗಳೂರು: ಪೂರ್ವ ಮುಂಗಾರು ಮಳೆಯ ಅಬ್ಬರದ ನಡುವೆ ರಾಜ್ಯಕ್ಕೆ ಗುಡ್ನ್ಯೂಸ್ ಸಿಕ್ಕಿದೆ. ಜೂನ್ 7 ಅಥವಾ 8ರಂದು ಮುಂಗಾರು ಮಾರುತಗಳು ಕರ್ನಾಟಕ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ.19 ರಂದು ನೈಋತ್ಯ ಮುಂಗಾರು ಮಾರುತಗಳು ಅಂಡಮಾನ್ ನಿಕೋಬಾರ್ ಮೂಲಕ ಭಾರತವನ್ನು ಪ್ರವೇಶ ಮಾಡಲಿವೆ. ಮೇ 31 ರಂದು ಕೇರಳಕ್ಕೆ ಮಾರುತಗಳು ತಾಕಲಿವೆ.
ಜೂನ್ ಮೊದಲ ವಾರದಲ್ಲಿ ಈ ಮಾರುತಗಳು ಕರ್ನಾಟಕವನ್ನು ಪ್ರವೇಶ ಮಾಡಲಿವೆ. ಆದ್ದರಿಂದ ಜೂನ್ 7 ಅಥವಾ 8 ರಂದು ಮುಂಗಾರು ಮಳೆ ಶುರುವಾಗಲಿದೆ. ಈ ಬಾರಿ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.