ಮನಕಲಕುವ ಘಟನೆ ; ತಾಯಿ ಶವದೊಂದಿಗೆ 4 ದಿನ ಕಳೆದ ಮಗಳು.. ಆಸ್ಪತ್ರೆಯಲ್ಲಿ ಆಕೆಯೂ ಸಾವು

ಉಡುಪಿ : ಕುಂದಾಪುರ ತಾಲೂಕಿನ ದಾಸನಹಾಡಿ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಮದುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ತನ್ನ ತಾಯಿ ಮೃತಪ್ಪಟ್ಟಿದ್ದರೂ ಅದನ್ನು ಅರಿಯದ ಬುದ್ಧಿಮಾಂದ್ಯ ಪುತ್ರಿ ತಾಯಿಯ ಶವದ ಜೊತೆ 4 ದಿನ ಕಳೆದಿದ್ದಾಳೆ.

ದಾಸನಹಾಡಿ ಗ್ರಾಮದ ಜಯಂತಿ ಶೆಟ್ಟಿ ಮೃತಪಟ್ಟಿದ್ದ ಮಹಿಳೆ. ಇವರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. ಆದರೆ ಕಾಲು ಜಾರಿ ಬಿದ್ದು ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಅಕ್ಕ ಪಕ್ಕದ ಮನೆಯವರು 3 ದಿನದಿಂದ ಯಾವುದೇ ಚಟುವಟಿಕೆ ಇಲ್ಲದೆ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ತಿಳಿಸಿ ಮನೆ ಒಳಗೆ ನೋಡಿದಾಗ, ತಾಯಿಯ ಕೊಳೆತ ಶವದ ಪಕ್ಕದಲ್ಲಿ ಬುದ್ಧಿಮಾಂದ್ಯ ಮಗಳು ಪ್ರಗತಿ ಅನ್ನ ಆಹಾರವಿಲ್ಲದೆ ಬಳಲಿ ಮಲಗಿದ್ದಳು.

ತಕ್ಷಣ ಪೊಲೀಸರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗಳು ಕೂಡ ಮೃತಪಟ್ಟಿದ್ದಾಳೆ.

You cannot copy content from Baravanige News

Scroll to Top