ಧ್ವನಿ ವರ್ಧಕ ಬಳಕೆಗೆ ರಾತ್ರಿ 11 ಗಂಟೆ ನಂತರ ಸುಪ್ರೀಂ ಕೋರ್ಟ್ ನಿರ್ಬಂಧ : ಗೊಂದಲದಲ್ಲಿ ಯಕ್ಷಗಾನ ಮೇಳಗಳು..!

ಉಡುಪಿ: ಕರಾವಳಿ ಭಾಗದಲ್ಲಿ ಪ್ರತಿವರ್ಷವೂ ನವೆಂಬರ್ ನಲ್ಲಿ ಯಕ್ಷಗಾನ ಮೇಳಗಳು ತಿರುಗಾಟ ಆರಂಭಿಸುತ್ತವೆ. ಆದರೆ ಈ ಬಾರಿ ಯಕ್ಷಗಾನ ಮೇಳಗಳ ರಾತ್ರಿ ಪ್ರದರ್ಶನ ಮಾಡುವ ವಿಚಾರದಲ್ಲಿ ಗೊಂದಲಕ್ಕೆ ಬಿದ್ದಿವೆ. ಹೌದು, ಸುಪ್ರೀಂ ಕೋರ್ಟ್ ಇತ್ತೀಚೆಗೆ ರಾತ್ರಿ 11 ಗಂಟೆ ಬಳಿಕ ಧ್ವನಿವರ್ಧಕ ಬಳಕೆಗೆ ನಿರ್ಬಂಧ ವಿಧಿಸಿದೆ.

ಆ ಕಾರಣಕ್ಕೆ ಯಕ್ಷಗಾನ ಮೇಳಗಳು ಇಡೀ ರಾತ್ರಿ ಹೇಗೆ ಪ್ರದರ್ಶನ ನೀಡಬೇಕು ಎನ್ನುವ ಗೊಂದಲವಿದೆ. ತೆಂಕು ಹಾಗೂ ಬಡಗಿನಲ್ಲಿ ಕೆಲ ಮೇಳಗಳು ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಸಿದರೂ, ಪ್ರಮುಖ ಬಯಲಾಟ ಮೇಳಗಳು ಇಡೀ ರಾತ್ರಿ ಪ್ರದರ್ಶನ ನಡೆಸುತ್ತಾ ಬಂದಿದೆ. ಅವುಗಳಲ್ಲಿ ಕಟೀಲು ಮೇಳದಲ್ಲಿ ಕಾಲ ಮಿತಿ ನಡೆಸಿ, 10.30 ಒಳಗೆ ಯಕ್ಷಗಾನ ನಡೆಸುವ ಬಗ್ಗೆ ಚಿಂತನೆ ಇದೆ.

ಇನ್ನು ಉಡುಪಿ ಜಿಲ್ಲೆಯಲ್ಲಿ ಮಂದಾರ್ತಿ ಮೇಳ, ಬಡಗಿನ ದೊಡ್ಡ ಮೇಳವಾಗಿದ್ದು, ರಾತ್ರಿ ಇಡೀ ಮಂದಾರ್ತಿಯ ಎಲ್ಲ ಮೇಳಗಳು ಯಕ್ಷಗಾನ ಪ್ರದರ್ಶನ ನಡೆಸುತ್ತವೆ. ಈ ಬಾರಿ ಇಡೀ ರಾತ್ರಿ ನಡೆಸುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮುಂದಿನ ತಿಂಗಳು ಅಂದರೆ ನವೆಂಬರ್ 17 ರಿಂದ ಮೇಳಗಳು ತಿರುಗಾಟ ನಡೆಸುವ ಬಗ್ಗೆ ದಿನ ನಿಗಧಿ ಆದರೂ ಕಾಲ ಮಿತಿಯೋ ಅಥವಾ ಇಡೀ ರಾತ್ರಿಯೋ ಎನ್ನುವ ಬಗ್ಗೆ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಲಿಲ್ಲ.

Scroll to Top