ಉಡುಪಿ : ಟಿಸಿ ಕೊಟ್ಟಿಲ್ಲವೆಂದು ಡೆತ್ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಉಡುಪಿ, ಮೇ.21: ಟಿಸಿ (ವರ್ಗಾವಣೆ ಪ್ರಮಾಣ ಪತ್ರ) ಕೊಟ್ಟಿಲ್ಲ ಎಂದು ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣನಾಗಿದ್ದ ವಿದ್ಯಾರ್ಥಿಯೋರ್ವರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.

ಟಿಸಿ ಕೊಟ್ಟಿಲ್ಲವೆಂದು ಬೈಂದೂರು ಸರ್ಕಾರಿ ಪ್ರೌಢಶಾಲೆಯ ಹೈಸ್ಕೂಲ್ ವಿದ್ಯಾರ್ಥಿ ನಿತಿನ್ ಆಚಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಟಿಸಿ ಕೊಡದೆ ಮುಖ್ಯೋಪಾಧ್ಯಾಯರು ಬೈದಿದ್ದಾರೆ ಎಂದು ಡೆತ್​ ನೋಟ್ ಬರೆದಿಟ್ಟು ನಿತಿನ್ ಮನೆಯಲ್ಲಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೈಂದೂರು ಸರಕಾರಿ ಪ್ರೌಢಶಾಲೆಯ ಹೈಸ್ಕೂಲ್ ವಿದ್ಯಾರ್ಥಿ ನಿತಿನ್ ಎಸ್.ಎಸ್​.ಎಲ್​.ಸಿ ಪಾಸ್ ಆಗಿದ್ದ. ಈ ಹಿನ್ನೆಲೆಯಲ್ಲಿ ಟಿಸಿ ಪಡೆದುಕೊಂಡು ಕಾಲೇಜಿಗೆ ಪ್ರವೇಶ ಪಡೆದುಕೊಳ್ಳಬೇಕಿತ್ತು. ಹೀಗಾಗಿ ಪಿಯುಸಿ ಸೇರ್ಪಡೆಯಾಗಲು ಟಿಸಿ ಪಡೆಯಲು ಶಾಲೆಗೆ ಹೋಗಿದ್ದಾನೆ. ಆದರೆ, ಮುಖ್ಯೋಪಾಧ್ಯಾಯ ಸುರೇಶ್ ಭಟ್ ಅವರು ಟಿಸಿ ಕೊಡದೆ ಬೈದಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಡೆತ್​ನಲ್ಲಿ ಉಲ್ಲೇಖಿಸಿದ್ದಾನೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top