ತಿರುವನಂತಪುರಂ, ಮೇ 23: ಮುಂದಿನ 24 ಗಂಟೆ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕೇರಳದ 5 ಜಿಲ್ಲೆಗಳಿಗೆ ರೆಡ್ ಅಲರ್ಟ್, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಕೇರಳದಲ್ಲಿ ಪೂರ್ವ ಮುಂಗಾರಿನ ಅರ್ಭಟ ಜೋರಾಗಿದೆ. ಕುನ್ನಮಂಗಲಂ: 197 ಮಿ.ಮೀ, ಕುಮರಕೊಂ: 158ಮಿ.ಮೀ, ತೈಕಟ್ಟುಸ್ಸೆರಿ: 156 ಮಿ.ಮೀ, ಪಲ್ಲುರುತಿ: 127ಮಿ.ಮೀ, ಚೂಂಡಿ: 108 ಮಿ.ಮೀ, ತೆನ್ನಾಲ: 107 ಮೀ.ಮೀ., ಪರವೂರು 100 ಮಿ.ಮೀ, ಕಲಮಸ್ಸೆರಿ: 82 ಮಿ.ಮೀ ಹಾಗೂ ಇರಕ್ಕೂರ್: 80 ಮಿ.ಮೀ ಮಳೆಯಾಗಿದೆ.
ಇನ್ನು ಕರ್ನಾಟಕದ 7 ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು, ಉಡುಪಿ ಜಿಲ್ಲೆಗಳಿಗೆ ಮಳೆಯಾಗುವ ಸಂಭವವಿದೆ. ಮಿಂಚು ಮತ್ತು ಬಿರುಗಾಳಿ ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿವೆ. ಸುಮಾರು 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.