ಡ್ರಾ ಮಾಡಿದ್ದು 5000 ಬಂದಿದ್ದು 4040 : ಇಂಡಿಯಾ ATM ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್

ರಾಮನಗರ : ಇಂಡಿಯಾ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ಖಾಸಗಿ ಶಾಲೆ‌ಯ ಶಿಕ್ಷಕಿಯೊಬ್ಬರಿಗೆ ಕಡಿಮೆ ಮೊತ್ತ ಬಂದಿರುವ ಘಟನೆಯೊಂದು ಇಂದು ಬೆಳಿಗ್ಗೆ ನಡೆದಿದೆ.

ರಾಮನಗರದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎಟಿಎಂ ನಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯಾದ ಸುಮಾ ಅವರು 5000 ರೂ ವಿತ್ ಡ್ರಾ ಮಾಡಿದ್ದಾರೆ ಆದರೆ ಶಿಕ್ಷಕಿಯ ಕೈಗೆ ಸಿಕ್ಕಿದ್ದು ಮಾತ್ರ 5000 ಬದಲು 4040 ರೂ. ಇದರಲ್ಲಿ 500 ರೂಗಳ 8 ನೋಟು, 20 ರೂ.2ನ ಎರಡು ನೋಟುಗಳು ಬಂದಿವೆ.

960 ರೂ ಕಡಿಮೆ ಬಂದಿರುವುದರಿಂದ ಗಾಬರಿಯಾದ ಶಿಕ್ಷಕಿ ಅಲ್ಲೇ ಇದ್ದ ಕೆ.ಎಸ್.ಆರ್.ಟಿ.ಸಿ. ಸಿಬಂದಿಗಳಿಗೆ ಮಾಹಿತಿ ನೀಡಿದ್ದಾರೆ ಕೂಡಲೇ ಅಲ್ಲಿನ ಸಿಬಂದಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

You cannot copy content from Baravanige News

Scroll to Top