ಕಾಪು: ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿ; ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಡಿತ

ಕಾಪು, ಮೇ 23: ತನ್ನ ಮೊಬೈಲ್‌ಗೆ ಬಂದ ಲಿಂಕ್ ಒಂದನ್ನು ಕ್ಲಿಕ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 82,200 ರೂಪಾಯಿ ಕಡಿತವಾದ ಘಟನೆ ಕಾಪುನಲ್ಲಿ ನಡೆದಿದೆ. ಭಾಸ್ಕರ್ ಎಂಬವರ ಮೊಬೈಲ್‌ಗೆ ಮೇ 22ರಂದು ಕೆನರಾ ಬ್ಯಾಂಕ್ ಹೆಸರಿನಲ್ಲಿ ಲಿಂಕೊಂದು ಬಂದಿತ್ತು. ಅದನ್ನು ಕ್ಲಿಕ್ ಮಾಡಿದ ಪರಿಣಾಮ ಅವರ ಕೆನರಾ ಬ್ಯಾಂಕ್‌ನ ಖಾತೆಗಳಲ್ಲಿದ್ದ 82,200 ರೂಪಾಯಿ ಕಡಿತವಾದ ಬಗ್ಗೆ ಮೆಸೇಜ್ ಬಂದಿತ್ತು. ಕೂಡಲೇ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಹಣ ಕಡಿತವಾಗಿರುವುದು ಖಚಿತವಾಯಿತು. ಸೈಬರ್ ವಂಚಕರು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.

ವಂಚನೆಗೊಳಗಾದ ಭಾಸ್ಕರ್ 1930ಕ್ಕೆ ಕರೆ ಮಾಡಿ ದೂರು ನೀಡಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top