ಮೈಸೂರು : ನನಗೂ ಅಂತರ್ಜಾತಿ ವಿವಾಹ ಆಗೋ ಆಸೆ ಇತ್ತು. ನಾನು ಕಾನೂನು ಓದುವಾಗ ಬೇರೆ ಜಾತಿ ಸ್ನೇಹಿತೆಯನ್ನು ಮದುವೆ ಆಗಬೇಕು ಎಂದುಕೊಂಡಿದ್ದೆ. ಆದರೆ ಆ ಹುಡುಗಿ ಮದುವೆಗೆ ಒಪ್ಪಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಕಾಲೇಜು ದಿನಗಳ ಲವ್ ಸ್ಟೋರಿ ನೆನೆದರು.
ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಕಾಲೇಜಿಗೆ ಹೋಗುವಾಗ ಒಂದು ಹುಡುಗಿ ಜೊತೆಗೆ ಸ್ನೇಹ ಇತ್ತು. ಹೀಗೆಂದ ಮಾತ್ರಕ್ಕೆ ತಪ್ಪಾಗಿ ಭಾವಿಸಬೇಡಿ. ಆಕೆಯನ್ನೇ ಮದುವೆ ಆಗಬೇಕು ಎಂದಿದ್ದೆ. ಆದರೆ, ಅದಕ್ಕೆ ಅವರ ಮನೆಯವ್ರು ಕೂಡ ಒಪ್ಪಲಿಲ್ಲ ಎಂದರು.
ಅಂದು ಆ ಹುಡುಗಿ ಮತ್ತು ಮನೆಯವ್ರು ಮದುವೆ ಒಪ್ಪದ ಕಾರಣ ನಾನು ಅಂತರ್ಜಾತಿ ವಿವಾಹ ಆಗಲು ಆಗಲಿಲ್ಲ. ಕೊನೆಗೆ ನಮ್ಮ ಜಾತಿ ಹುಡುಗಿಯನ್ನೇ ಮದುವೆ ಆಗಬೇಕಾಯ್ತು. ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ ಎಂದರು.