ಉಡುಪಿಯ ಕಾಪು ಮೂಲದ ಗರುಡ ಗ್ಯಾಂಗ್ನಿಂದ ನಡೆದ ವಾರ್ನಲ್ಲಿ ಭಾಗಿಯಾದ 8 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವೀಡಿಯೋ ದೃಶ್ಯಾವಳಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಗ್ಯಾಂಗ್ನಲ್ಲಿರುವ ಆಶಿಕ್ ಮತ್ತು ರಾಕೀಬ್ ಟೀಮ್ ನಡುವೆ ಈ ಗಲಾಟೆ ನಡೆದಿದೆ. ಇನ್ನು ಗಲಾಟೆಯಲ್ಲಿ ಬಳಸಲಾಗಿದ್ದ 2 ಕಾರು, ಬೈಕ್, ತಲವಾರು ಮತ್ತು ಡ್ರ್ಯಾಗರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಸೀಜ್
ಈ ಗ್ಯಾಂಗ್ ವಾರ್ ಕೇಸ್ಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಮಾತನಾಡಿ, ಉಡುಪಿಯ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ವಾರದ ಹಿಂದೆ ಒಂದೇ ಗ್ಯಾಂಗ್‌ನ 2 ಗುಂಪುಗಳು ಗಲಾಟೆ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದರ ಸಲುವಾಗಿ ಮೇ 20ರಂದು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಇನ್ನು ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಕಾರು, 2 ಬೈಕ್, ಚಾಕು, ತಲ್ವಾರ್ಗಳನ್ನ ಸೀಜ್ ಮಾಡಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಆದಷ್ಟು ಬೇಗನೇ ಅವರನ್ನು ಪತ್ತೆ ಮಾಡಿ ಮುಂದೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಗರುಡ ಗ್ಯಾಂಗ್ನಲ್ಲಿ ಆಂತರಿಕ ಜಗಳ ನಡೆಯುತ್ತಿದೆ. ಸದಸ್ಯರ ನಡುವೆ ಪರಸ್ಪರ ವೈಷಮ್ಯ ಹೊಟ್ಟೆ ಕಿಚ್ಚು ಗಲಾಟೆಗೆ ಕಾರಣವಾಗುತ್ತಿದೆ. ಗ್ಯಾಂಗ್ ವೀಕ್ ಆಗಿದೆ ಎಂಬ ಕಾರಣಕ್ಕೆ ಆಗಾಗ ಜಗಳ ಇದೇ ರೀತಿ ನಡೆಯುತ್ತಿರುತ್ತದೆ. ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಯಾವುದು ಈ ಗರುಡ ಗ್ಯಾಂಗ್?
ಮೊದಲು ದನ ಕಳ್ಳತನ ಮಾಡಲು ಆರಂಭವಾಗಿದ್ದ ಗ್ಯಾಂಗ್
ಸುಮಾರು ಹದಿನೈದು ಮಂದಿ ಸೇರಿ ಕಟ್ಟಿದ್ದ ಗರುಡ ಗ್ಯಾಂಗ್
ರಾಬರಿ, ಕಿಡ್ನ್ಯಾಪ್, ಹಪ್ತಾವಸೂಲಿ, ಚೈನ್ ಸ್ನ್ಯಾಚ್, ಸೆಟ್ಲ್ಮೆಂಟ್
ವಾಹನ ಕಳವು ಮತ್ತು ಫೈನಾನ್ಸ್ ರಿಕವರಿಯಲ್ಲಿ ಗ್ಯಾಂಗ್ ಕಾರ್ಯ
ಹತ್ತು ವರ್ಷಗಳ ಹಿಂದೆ ಪ್ರಾರಂಭವಾದ ಗ್ಯಾಂಗ್ನ ಮನಸ್ತಾಪ
ಗರುಡ ಗ್ಯಾಂಗ್ ಸದಸ್ಯರ ಕುರಿತು ಜಿಲ್ಲೆಯಾದ್ಯಂತ ಪ್ರಕರಣ
ಭಿನ್ನಮತ ಕಾಣಿಸಿಕೊಂಡಿದ್ದ ಹಿನ್ನೆಲೆ ಗರುಡ ಗ್ಯಾಂಗ್ ಸೈಲೆಂಟ್
ಕಳೆದ ನಾಲ್ಕು ವರ್ಷದಿಂದ ತಟಸ್ಥವಾಗಿರೋ ಗರುಡ ಗ್ಯಾಂಗ್
ಸದ್ಯ ಕಾರು ವ್ಯಾಪಾರದ ವಿಚಾರವಾಗಿ ಗ್ಯಾಂಗ್ ಸದಸ್ಯರ ಜಿದ್ದು
ಗ್ಯಾಂಗ್ ವಾರ್ ಮೊದಲು ಕಾಪುವಿನಲ್ಲಿ ನಡೆದಿತ್ತು ಟಾಕ್ ವಾರ್
ಗ್ಯಾಂಗ್ ಸದಸ್ಯ ಮಜಿದ್ ಮತ್ತು ಆಶಿಕ್ ನಡುವೆ ಮಾತಿನ ಚಕಮಕಿ
ಈ ಬಳಿಕ ಆಶಿಕ್ನ ಉಡುಪಿಗೆ ಕರೆಸಿಕೊಂಡಿದ್ದ ಮಜೀದ್ ಗ್ಯಾಂಗ್
ತಲ್ವಾರ್, ಡ್ಯಾಗರ್, ದೊಣ್ಣೆಗಳ ಹಿಡಿದು ಬಂದಿದ್ದ ಮಜೀದ್ ಗ್ಯಾಂಗ್
ಕಾರಿನಲ್ಲಿ ಕುಳಿತಿದ್ದ ಆಶಿಕ್ ಕಾರಿಗೆ ಡಿಕ್ಕಿ ಹೊಡೆದ ಮಜೀದ್ ಗ್ಯಾಂಗ್
ಕುಂಜಿಬೆಟ್ಟು ಬಳಿ ಎರಡು ತಂಡಗಳ ಮುಖಾಮುಖಿ ಗ್ಯಾಂಗ್ ವಾರ್