ಉಡುಪಿ: ಪಾರ್ಟ್ ಟೈಮ್ ಜಾಬ್ ಆಮಿಷ: ಲಕ್ಷಾಂತರ ರೂ.ಕಳೆದುಕೊಂಡ ಯುವಕ

ಉಡುಪಿ: ಪಾರ್ಟ್‌ಟೈಮ್‌ ಜಾಬ್‌ ಬಗ್ಗೆ ಟೆಲಿಗ್ರಾಂ ಆ್ಯಪ್‌ನಲ್ಲಿ ಬಂದ “ಇಟಜಿn ಈಇಗಿಕ01 ಆOಖ” ಗ್ರೂಪ್‌ಗೆ ಸೇರಿಕೊಂಡ ಯುವಕ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

ಮಣಿಪಾಲದ ಹಾಸ್ಟೆಲ್‌ನಲ್ಲಿರುವ ಸೌರಭ್‌ ಅವರು ಮೇ 18ರಂದು ಹಾಸ್ಟೆಲ್‌ನಲ್ಲಿರುವಾಗ ಅವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಕುರಿತು ಲಿಂಕ್‌ವೊಂದನ್ನು ಕಳಿಸಿ ಟೆಲಿಗ್ರಾಮ್‌ ಆಫ್ ನಲ್ಲಿರುವ ““Coin DCXP01-BOT ””ಗ್ರೂಪ್‌ ಗೆ ಸೇರುವಂತೆ ತಿಳಿಸಿದ್ದಾನೆ. ಅದರಂತೆ ಸೌರಭ್‌ ಅವರು ಸೇರಿದ್ದು ಅನಂತರ ಟೆಲಿಗ್ರಾಮ್‌ ಗ್ರೂಪ್‌ನಲ್ಲಿರುವ ಅಪರಿಚಿತ ವ್ಯಕ್ತಿಯು ವಿವಿಧ ರೀತಿಯ ಟಾಸ್ಕ್ ನೀಡಿ ಅದನ್ನು ಪುರ್ಣಗೊಳಿಸಿದರೇ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವುದಾಗಿ ನಂಬಿಸಿ, ಬ್ಯಾಂಕ್‌ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದಾನೆ.

ಸೌರಭ್‌ ಅವರು ವಿವಿಧ ರೀತಿಯ ಟಾಸ್ಕ್ ಗಳನ್ನು ಪೂರ್ಣಗೊಳಿಸಿದ ಅನಂತರ 5,600 ರೂ. ಬೇರೆ ಕಂತುಗಳಲ್ಲಿ ಸೌರಭ್‌ ಅವರ ಖಾತೆಗೆ ಜಮೆಯಾಗಿತ್ತು. ಅನಂತರ ಅಪರಿಚಿತ ವ್ಯಕ್ತಿಯು ಇನ್ನೂ ಹೆಚ್ಚು ಲಾಭ ಪಡೆಯಲು ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ ಮೇರೆಗೆ ಸೌರಭ್‌ ಅವರು 10,66,590 ರೂ.ಗಳನ್ನು ಅವರ ಹಾಗೂ ಅವರ ಸ್ನೇಹಿತೆಯ ಖಾತೆಯ ಮೂಲಕ ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ನೀಡಿದ ಹಣವನ್ನಾಗಲಿ, ಲಾಭಾಂಶವನ್ನಾಗಲಿ ನೀಡದೆ ವಂಚಿಸಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Baravanige News

Translate »

You cannot copy content from Baravanige News

Scroll to Top