ಪೋಷಕರೇ ಹುಷಾರ್.. ಶಾಲೆಗೆ ಹೋಗೋ ವಿದ್ಯಾರ್ಥಿನಿಯರೇ ಈ ಕಿಡಿಗೇಡಿಗಳ ಟಾರ್ಗೆಟ್..!

ಬೆಂಗಳೂರು: ಕೆಲ ದಿನಗಳ ಹಿಂದೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಡೀಫ್ ಫೇಕ್ ವೀಡಿಯೋ ಓವರ್ ಸ್ಪೀಡ್ನಲ್ಲಿ ವೈರಲ್ ಆಗಿತ್ತು. ಸೆಲೆಬ್ರಿಟಿಗಳ ನಿದ್ದೆಗೂ ಬ್ರೇಕ್ ಬಿದ್ದಿತ್ತು. ರಶ್ಮಿಕಾ ಫೇಕ್ ವೀಡಿಯೋ ಕ್ರಿಯೇಟರ್ ಲಾಕ್ ಆಗ್ತಿದ್ದಂತೆ ಸೈಲೆಂಟಾಯ್ತು ಅನ್ನುವಷ್ಟರಲ್ಲಿ ಇದೀಗ ಸ್ಕೂಲ್ ಸ್ಟೂಡೆಂಟ್ಸ್ಗೆ ಡೀಪ್ಫೇಕ್ ಕಾಟ ಶುರುವಾಗಿದೆ.

ಹೆಣ್ಣು ಮಕ್ಕಳ ಭವಿಷ್ಯ ಕತ್ತಲ ಕೂಪಕ್ಕೆ ತಳ್ಳಲ್ಪಡ್ತಿದ್ಯಾ ಅನ್ನೋ ಆತಂಕ ಕಾಡ್ತಿದೆ.

9ನೇ ತರಗತಿ ವಿದ್ಯಾರ್ಥಿನಿಯ ಇನ್ಸ್ಟಾ ಗ್ರೂಪ್​​​ನಲ್ಲಿ ಆಕೆಯ ನಗ್ನ ಫೋಟೋ ವೈರಲ್ ಆಗಿದೆ. ಆದರೆ ಆ ಇನ್​ಸ್ಟಾ ಗ್ರೂಪ್​ನಲ್ಲಿ ನಗರದ 50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಇದ್ದರು. ಯಾವಾಗ ವಿದ್ಯಾರ್ಥಿನಿಯ ಎಐ ಅಲ್ಲಿ ರಚಿಸಲಾದ ನಗ್ನ ಫೋಟೋ ವೈರಲ್ ಆಗುತ್ತಿದ್ದಂತೆ ಆಕೆ ಪೋಷಕರಿಗೆ ತಿಳಿಸಿದ್ದಾಳೆ. ಅಲರ್ಟ್​​ ಆದ ಪಾಲಕರು ಸೈಬರ್​ ಸೆಲ್​ಗೆ ದೂರು ಕೊಟ್ಟಿದ್ದಾರೆ.

50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿನಿಯರು ಈ ಗ್ರೂಪ್​​ನಲ್ಲಿದ್ದಾರೆ. ಅಂದ್ರೆ ಸಂಖ್ಯೆ ಎಷ್ಟಿರೋದ್ಬೋದು ಅನ್ನೋದು ಲೆಕ್ಕಕ್ಕೆ ಸಿಗೋದು ಕಷ್ಟ. ಆದ್ರೆ, ವಿದ್ಯಾರ್ಥಿನಿಯ ಫೋಟೋ ವೈರಲ್​ ಆಗಿದ್ದು ಸತ್ಯ. ಶಾಲಾ ಗ್ರೂಪ್​ನಲ್ಲಿ ಇದ್ದಾನೆಂದರೆ ಆತ ಖಂಡಿತ ವಿದ್ಯಾರ್ಥಿ ಆಗಿರಬಹುದು. ಅದೇನೆ ಹೇಳಿ ಶಾಲಾ ಮಕ್ಕಳ ಭವಿಷ್ಯ ಕತ್ತಲ ಕೂಪದಲ್ಲಿ ತಳ್ಳಲ್ಪಡ್ತಿರೋ? ಇಂತಹ ನೀಚ ಕೆಲಸ ಮಾಡ್ತಿರುವ ಕಿಡಿಗೇಡಿಗಳಿಗೆ ಸೂಕ್ತ ಕ್ರಮ ಆಗಬೇಕಿದೆ.

Baravanige News

Translate »

You cannot copy content from Baravanige News

Scroll to Top