ಪುತ್ತೂರು : ನೆಹರೂನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮತ್ತು 4ನೇ ಆರೋಪಿಗಳಾದ ಮಂಜುನಾಥ್ (ಮಂಜ) ಹಾಗೂ ಕೇಶವ ಪಡೀಲ್ ಇವರ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಲ ದಿನಗಳ ಹಿಂದೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕೃತಗೊಳಿಸಿದ್ದು, ದೂರುದಾರರ ಪರ ಸರ್ಕಾರಿ ಅಭಿಯೋಜಕರಾದ ಜಯಂತಿ ವಾದಮಂಡಿಸಿದ್ದರು.
ಹೈಕೋರ್ಟ್ ನ್ಯಾಯವಾದಿಗಳ ಮೂಲಕ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, ದೂರುದಾರ ವಿಖ್ಯಾತ್ ಪರ ಹೈಕೋರ್ಟ್ ನ್ಯಾಯವಾದಿಗಳಾದ ರಾಜಶೇಖರ್ ಹಿಲ್ಯಾರ್ ಸುಧೀರ್ಘ ವಾದಮಂಡಿಸಿದ್ದು., ಇದೀಗ ಹೈಕೋರ್ಟ್ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದೆ. ಅಲ್ಲದೇ ದೂರುದಾರರ ವಿಚಾರಣೆ ಮುಗಿಯುವ ತನಕ ಯಾವುದೇ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸದಂತೆ ಆದೇಶಿಸಿದೆ ಎಂದು ತಿಳಿದುಬಂದಿದೆ.