ಜನಪ್ರಿಯ ಮೆಟಾ ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಸ್ಟೇಟಸ್ ಅವಧಿಯನ್ನ ಇದೀಗ ಒಂದು ನಿಮಿಷಕ್ಕೆ ಏರಿಕೆ ಮಾಡಿದೆ.
ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಅದರೀಗ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತಂದಿದೆ. ಅದರಂತೆ ಸ್ಟೇಟಸ್ ವಿಡಿಯೋ ಮಿತಿಯನ್ನು ಏರಿಕೆ ಮಾಡಿದೆ.
ವಾಟ್ಸ್ಆ್ಯಪ್ ಬಳಸುವವರು ಇದೀಗ 1 ನಿಮಿಷ ಅವಧಿಯ ವೀಡಿಯೋಗಳನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ. ಆ ಮೂಲಕ ದೀರ್ಘ ಅವಧಿಯ ವೀಡಿಯೋ ಹಂಚಿಕೊಳ್ಳಬಹುದಾಗಿದೆ.
ವಾಟ್ಸ್ಆ್ಯಪ್ನಲ್ಲಿ ಈ ಮೊದಲು 30 ಸೆಕೆಂಡ್‌ಗಳ ವಿಡಿಯೋವನ್ನು ಸ್ಟೇಟಸ್ ಹಾಕಿಕೊಳ್ಳಬಹುದಾಗಿತ್ತು. ಆದರೀಗ ಅವಧಿಯನ್ನು ಹೆಚ್ಚಿಸಿದೆ. ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್ ಮಾಡುವ ಮೂಲಕ ನೂತನ ಫೀಚರ್ಸ್ ಬಳಕೆಗೆ ಸಿಗಲಿದೆ. ಇನ್ನು ಐಫೋನ್ ಬಳಕೆದಾರರು iOS 24.10.10.74ಗೆ ಅಪ್‌ಡೇಟ್ ಮಾಡುವ ಮೂಲಕ ಹೊಸ ಫೀಚರ್ ಬಳಸಬಹುದಾಗಿದೆ.