ಜಪಾನಿನ ಟ್ರೆಂಡ್ ಭಾರತಕ್ಕೂ ಬಂತು, ಸಿಂಗಲ್‌ ಅನ್ನೋ ಚಿಂತೆ ಬೇಡ, ಬಾಡಿಗೆಗೆ ಸಿಗ್ತಾಳೆ ಗರ್ಲ್‌ಫ್ರೆಂಡ್‌!

ಸುತ್ತಮುತ್ತಲು ಅದೆಷ್ಟೇ ಜನರಿದ್ರೂ ಒಂಟಿತನ ಕಾಡೋ ಸಮಸ್ಯೆ. ಆದ್ರೆ ಇನ್ಮುಂದೆ ಅಂಥಾ ಸಮಸ್ಯೆಯೆಲ್ಲಾ ಇರಲ್ಲ ಬಿಡಿ. ಯಾಕಂದ್ರೆ ಜಪಾನಿನಲ್ಲಿ ಇರೋ ಹಾಗೆಯೇ ಭಾರತದಲ್ಲೂ ಗರ್ಲ್‌ಫ್ರೆಂಡ್ ಬಾಡಿಗೆಗೆ ಸಿಗ್ತಾಳೆ. ಹಣ ಪಾವತಿಸಿ ಬಾಡಿಗೆ ಗೆಳತಿಯನ್ನು ಪಡೆಯಬಹುದಾಗಿದೆ.

ಭಾರತದ ಮಹಿಳೆಯೊಬ್ಬಳು ತಾನು ಬಾಡಿಗೆಗೆ ಗರ್ಲ್‌ಫ್ರೆಂಡ್ ಆಗಲು ಲಭ್ಯವಿದ್ದೇನೆ ಎಂದು ಪೋಸ್ಟ್ ಹಾಕಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.

ಜಪಾನಿನಲ್ಲಿ ಹೆಚ್ಚುತ್ತಿರುವ ಅವಿವಾಹಿತರ ಸಂಖ್ಯೆಯಿಂದಾಗಿ ಈ ಪರಿಕಲ್ಪನೆ ಕಾನೂನುಬದ್ಧವಾಗಿ ಜಾರಿಗೆ ಬಂದಿದೆ. ನಿರ್ದಿಷ್ಟ ಹಣವನ್ನು ಪಾವತಿಸಿ ಗರ್ಲ್‌ಫ್ರೆಂಡ್‌ನ್ನು ರೆಂಟ್ ಪಡೆದು ಎಲ್ಲಿ ಬೇಕಂದ್ರಲ್ಲಿ ಸುತ್ತಾಡ್ಬೋದು. ಈ ಬಾಡಿಗೆ ಸಂಬಂಧಗಳು ನಿಜವಾದ ಸಂಬಂಧವನ್ನು ಅನುಕರಿಸುವಂತೆಯೇ ಇರುತ್ತದೆ. ಉದಾಹರಣೆಗೆ ಡೇಟ್‌ಗೆ ಹೋಗುವುದು, ಒಟ್ಟಿಗೆ ಊಟ ಮಾಡುವುದು, ಇವೆಂಟ್‌ಗಳಿಗೆ ಹಾಜರಾಗುವುದು ಒಳಗೊಂಡಿರುತ್ತದೆ. ಇದು ಜಪಾನ್‌ನಲ್ಲಿ ಪರಿಚಿತ ಪರಿಕಲ್ಪನೆಯಾಗಿದ್ದರೂ, ಭಾರತದಲ್ಲಿ ಇದು ತುಂಬಾ ಅಪರೂಪ.

ಭಾರತದ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ಬಾಡಿಗೆ ಗರ್ಲ್‌ಫ್ರೆಂಡ್‌ ಆಗಲು ಲಭ್ಯವಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ರೇಟ್‌ ಚಾರ್ಟ್‌ನ್ನು ಪೋಸ್ಟ್ ಮಾಡಿದ್ದು, ಜಪಾನ್‌ನಲ್ಲಿ ಇರುವಂತೆಯೇ ಹಲವು ಸೇವೆಗಳು ಲಭ್ಯವಿದೆ ಎಂದು ಹೇಳಿದ್ದಾರೆ. ಇದು ಆನ್‌ಲೈನ್‌ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬರು ರೀಲ್‌ನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ‘ಸಿಂಗಲ್ ಡೇಟ್‌ಗೆ ಹೋಗಲು ಸಿದ್ಧರಿದ್ದೀರಾ, ನನ್ನನ್ನು ಬಾಡಿಗೆ ಪಡೆಯಿರಿ’ ಎಂದು ಶೀರ್ಷಿಕೆ ನೀಡಲಾಗಿದೆ. ನಂತರ ವಿವಿಧ ರೀತಿಯ ಸೇವೆಗೆ ದರಗಳನ್ನು ವಿವರಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಮಹಿಳೆಯ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ..

You cannot copy content from Baravanige News

Scroll to Top