ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ : ರಘುಪತಿ ಭಟ್‌

ಉಡುಪಿ : ಜನತೆಯ ಆಶೀರ್ವಾದದಿಂದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 3 ಬಾರಿ ಶಾಸಕನಾಗಿದ್ದಾಗ ಉಡುಪಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುತ್ತೇನೆ. ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ನನ್ನನ್ನು ಹರಸಿ ಆಶೀರ್ವದಿಸಿದರೆ ವಿಧಾನಸಭೆ ಸದಸ್ಯನಾಗಿ ಕೆಲಸ ನಿರ್ವಹಿಸಿದ ಕಾರ್ಯಾನುಭವದೊಂದಿಗೆ ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡಿ ಪದವೀಧರರ, ಶಿಕ್ಷಕರ ಹಾಗೂ ಸರಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಅವರ ಧ್ವನಿಯಾಗುತ್ತೇನೆ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಕೆ. ರಘುಪತಿ ಭಟ್‌ ಹೇಳಿದರು.

ಅವರು ಶಿವಮೊಗ್ಗ ಹಾಗೂ ಶಿಕಾರಿಪುರದ ವಿವಿಧ ಭಾಗಗಳಲ್ಲಿ  ಮತದಾರರ ಸಭೆ ನಡೆಸಿ ಮಾತನಾಡಿದರು.

ಪದವೀಧರರಿಗೆ ಉದ್ಯೋಗ – ಪದವೀಧರರಿಂದ ಉದ್ಯಮ – ಸಹಾಯ – ಸಹಕಾರ – ಸಂಪರ್ಕ ಇದು ನನ್ನ ಆಶಯವಾಗಿದೆ. ಎಲ್ಲ ಸರಕಾರಿ ನೌಕರರ ಬೇಡಿಕೆಯಾದ ಎನ್‌ಪಿಎಸ್‌ (ನೂತನ ಪಿಂಚಣಿ ಯೋಜನೆ) ರದ್ದುಪಡಿಸಿ ಒಪಿಎಸ್‌ (ಹಳೆ ಪಿಂಚಣಿ ಯೋಜನೆ) ಜಾರಿಗೆ ತರಲು ವಿಧಾನ ಪರಿಷತ್‌ ನ ಒಳಗೆ ಮತ್ತು ಹೊರಗೆ ನಿಮ್ಮ ಧ್ವನಿಯಾಗುತ್ತೇನೆ. ಹಾಗೂ ಶಿಕ್ಷಕರ ಸಮಸ್ಯೆಗಳು ಮತ್ತು ಬೇಡಿಕೆಗಳ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಇದನ್ನು ಈಡೇರಿಸಲು ನಿಮ್ಮ ಧ್ವನಿಯಾಗುತ್ತೇನೆ ಎಂದ ಅವರು ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಮೊದಲ ಪ್ರಾಶಸ್ತ್ಯದ ಮತ ನೀಡಿ ಹರಿಸುವಂತೆ ಮನವಿ ಮಾಡಿದರು.

Scroll to Top