ಕೇರಳದಲ್ಲಿ ಮೊದಲ ಬಾರಿಗೆ ಅರಳಿದ ಕಮಲ; ಸಿಪಿಎಂ- ಕಾಂಗ್ರೆಸ್‌ಗೆ ಹೀನಾಯ ಸೋಲು..!

ಕೇರಳ, ಜೂ 04: ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕೇರಳದ ತ್ರಿಶ್ಶೂರ್ ನಲ್ಲಿ ಭಾರತೀಯ ಜನತಾ ಪಕ್ಷದ ಸುರೇಶ್ ಗೋಪಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕೇರಳದಲ್ಲಿ ಕಮಲ ಅರಳಿದೆ.

ಕೇರಳದ ತ್ರಿಶ್ಶೂರ್ ಲೋಕಸಭಾ ಕ್ಷೇತ್ರದಲ್ಲಿ ನಟ, ರಾಜಕಾರಣಿ, ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಗೆಲುವಿನ ನಗು ಬೀರಿದ್ದಾರೆ. ಪ್ರತಿಸ್ಪರ್ಧಿ ಸಿಪಿಐನ ವಿಎಸ್ ಸುನೀಲ್ ಕುಮಾರ್ ಮತ್ತು ಕಾಂಗ್ರೆಸ್‌ನ ಕೆ.ಮುರಳೀಧರನ್‌ ಅವರನ್ನು ಸೋಲಿಸಿ ಸಾಧನೆ ಮಾಡಿದ್ದಾರೆ. ಇದೀಗ ಎರಡನೇ ಪ್ರಯತ್ನದಲ್ಲಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ.

ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ಗೆಲವು ಪಡೆಯುವ ಮೂಲಕ ಬಿಜೆಪಿಯ ಕನಸು ನನಸು ಮಾಡಿದ್ದಾರೆ.

You cannot copy content from Baravanige News

Scroll to Top