ಸ್ನೇಹಿತನ ಬರ್ತ್ ಡೇ ಪಾರ್ಟಿಯಲ್ಲಿ ಹರಿಯಿತು ನೆತ್ತರು; ಗೆಳೆಯರಿಂದಲೇ ಯುವಕನ ಬರ್ಬರ ಹತ್ಯೆ; ಕಾರಣವೇನು?

ಬೆಳಗಾವಿ : ಸ್ನೇಹಿತನ ಬರ್ತ್ಡೇ ಪಾರ್ಟಿಯಲ್ಲಿ ಯುವಕನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಎಂಎಸ್‌ಡಬ್ಲ್ಯೂ ವ್ಯಾಸಂಗ ಮಾಡುತ್ತಿದ್ದ ಬಸವರಾಜ ಮುದ್ದಣ್ಣವರ್ (23) ಕೊಲೆಯಾದ ಯುವಕ.

ಬಸವರಾಜ ಮಲ್ಲಿಕಾರ್ಜುನ ಎನ್ನುವ ಸ್ನೇಹಿತನ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದ ಪಾರ್ಟಿಗೆ ಯುವಕ ಹೋಗಿದ್ದನು. ಆದರೆ ಬರ್ತ್ಡೇ ಪಾರ್ಟಿಗೆ ಆಗಮಿಸಿದ್ದ ಸ್ನೇಹಿತರ ನಡುವೆ ಗಲಾಟೆ ಆಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಯುವಕನ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಬೆಳಗಾವಿ ಜಿಲ್ಲಾಸ್ಪತ್ರೆಗೆ ಯುವಕನ ಮೃತದೇಹ ರವಾನಿಸಲಾಗಿದೆ. ಮಗನ ಕೊಲೆಯ ಸುದ್ದಿ ಕೇಳಿ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗನನ್ನ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು. ಮಗ ಯಾರ ಜಗಳಕ್ಕೂ ಹೋಗುತ್ತಿರಲಿಲ್ಲ, ಕಾಲೇಜಿನಲ್ಲಿ ಚಿನ್ನದ ಪದಕ ಪಡೆದು ಮಾದರಿಯಾಗಿದ್ದನು. ಬರ್ತ್ಡೇ ಪಾರ್ಟಿಗೆ ಹೋಗುತ್ತೇನೆ ಎಂದರೆ ಮೊದಲೇ ಕಳಿಸುತ್ತಿರಲಿಲ್ಲ. ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ತಾಯಿ ಒತ್ತಾಯಿಸಿದ್ದಾಳೆ.

You cannot copy content from Baravanige News

Scroll to Top