ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಕೋರ್ಟ್ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಮಹತ್ವದ ಆದೇಶ ನೀಡಿದೆ.
ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನ ಇಂದು ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಕೋರ್ಟ್ ಕಟಕಟೆಗೆ ಹಾಜರಾದ ಆರೋಪಿಗಳನ್ನ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡ ಅವರು ವಿಚಾರಣೆ ನಡೆಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಪವಿತ್ರಗೌಡ ಹಾಗೂ A3 ಪವನ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು. ನಂತರ A2 ಆರೋಪಿ ದರ್ಶನ್ ಸೇರಿ 6 ಮಂದಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದರು. ಕೊಲೆ ಆರೋಪ ಇರುವ ಆರೋಪಿಗಳಾದ ದರ್ಶನ್, ವಿನಯ್, ಪ್ರದೂಶ್, ನಾಗರಾಜ, ಲಕ್ಷ್ಮಣ್ & ಧನರಾಜ್ ಅವರನ್ನು ಕಸ್ಟಡಿಗೆ ಕೇಳಲಾಯಿತು.
6 ಮಂದಿ ಬಿಟ್ಟು ಉಳಿದವರಿಗೆ ಜೈಲು?
ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಸ್ಯಾಂಪಲ್ ಅನ್ನು FSLಗೆ ಕಳುಹಿಸಲಾಗಿದೆ. ಅದರ ರಿಪೋರ್ಟ್ ಇನ್ನೂ ಬರಬೇಕಿದೆ. ಅದರ ಆಧಾರದ ಮೇಲೆ ವಿಚಾರಣೆಯು ಬಾಕಿ ಇದೆ. ಹೀಗಾಗಿ ದರ್ಶನ್, ವಿನಯ್, ಪ್ರದೂಶ್ , ನಾಗರಾಜ, ಲಕ್ಷ್ಮಣ್ & ಧನರಾಜ್ ಅವರನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ.