ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್‌ ಬೆದರಿಕೆ..!

ಮಂಗಳೂರು, ಜೂ 21: ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್‌ ಬೆದರಿಕೆ ಹಾಕಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್‌ ೧೮ ರಂದು ಮಧ್ಯಾಹ್ನ 12.43 ಕ್ಕೆ ವಿಮಾನ ನಿಲ್ದಾಣದ ಇಮೇಲ್‌ ಐಡಿಗಳಿಗೆ ಅಪರಿಚಿತರು , ಏರ್‌ಪೋರ್ಟ್‌‌ನಲ್ಲಿ ಬಾಂಬ್‌ ಇಟ್ಟಿದ್ದು ಕೆಲವೇ ಕ್ಷಣದಲ್ಲಿ ಸ್ಪೋಟಗೊಳ್ಳಲಿದೆ ಎನ್ನುವ ಸಂದೇಶ ಕಳಿಸಿದ್ದಾರೆ.

ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಸೆಕ್ಯುರಿಟಿ ಅಧಿಕಾರಿ ಮೋನಿಷ್‌ ವಿಮಾನ ನಿಲ್ದಾಣದ ಒಳಗಡೆ ಮತ್ತು ಆವರಣದಲ್ಲಿ ತಪಾಸಣೆ ನಡೆಸಿ, ಯಾವುದೇ ತೊಂದರೆ ಇಲ್ಲವೆಂದು ಖಚಿತಪಡಿಸಿದ ಬಳಿಕ ಜೂನ್‌ 18 ರಂದು ಸಂಜೆ ಬಜ್ಪೆ ರಾಣೆಗೆ ದೂರು ನೀಡಿದ್ದಾರೆ.

ಅಪರಿಚಿತನೊರ್ವ ವಿಮಾನ ನಿಲ್ದಾಣದ ಎರಡು ಇಮೇಲ್‌ ಐಡಿಗಳಿಗೆ [email protected] ಇಮೇಲ್‌ ವಿಳಾಸದಿಂದ ಬೆದರಿಕೆ ಸಂದೇಶ ಕಳಿಸಿದ್ದಾನೆ.ವಿಮಾನ ನಿಲ್ದಾಣದ ಒಳಗಡೆ ಸ್ಪೋಟಕ ಸಾಮಗ್ರಿ ಅಡಗಿಸಿಟ್ಟಿದ್ದು, ಕೆಲವೇ ಕ್ಷಣದಲ್ಲಿ ಸ್ಪೋಟ ಅಗಲಿದೆ. ನೀವೆಲ್ಲ ಸಾಯಲಿದ್ದೀರಿ.

ಗ್ರೂಪ್‌ ಕೆಎನ್‌ಆರ್‌ ಇದರ ಹಿಂದಿದೆ. ಮೇ. 1ರ ಡೆಲ್ಲಿ ಸ್ಕೂಲ್‌ ಟ್ಯಾಕ್‌ ಕೃತ್ಯದಲ್ಲೂ ಇದೇ ಗ್ರೂಪ್‌ ಇತ್ತು ಎಂಬುವುದಾಗಿ ಬರೆದಿದ್ದಾನೆ. ಪೊಲೀಸರು ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.ಇದೇ ಮಾದರಿಯ ಇಮೇಲ್‌ ಸಂದೇಶವನ್ನು ಒಂದೇ ದಿನ ದೇಶದ 41 ವಿಮಾನ ನಿಲ್ದಾಣಗಳಿಗೆ ಕಳಿಸಿದ್ದಾರೆ , ಒಂದೇ ಇಮೇಲ್‌ ಐಡಿಯಿಂದ ಸಂದೇಶ ಕಳಿಸಲಾಗಿದೆ. ಮೇ. ಮೊದಲ ವಾರದಲ್ಲಿ ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ ಹಾಕಲಾಗಿತ್ತು.

Scroll to Top