ಪಿಕ್ನಿಕ್‍ಗೆ ತೆರಳಿದ್ದಾಗ ಅವಘಡ – ಮುಳುಗುತ್ತಿದ್ದವನ ರಕ್ಷಿಸಲು ಹೋಗಿ ನಾಲ್ವರು ದುರ್ಮರಣ

ರಾಯಗಡ ಜಿಲ್ಲೆಯ ಖಲಾಪುರ್‌ನ ಸಾಯಿ ಜಲಾಶಯಕ್ಕೆ ಪಿಕ್ನಿಕ್‍ಗೆ ಬಂದಿದ್ದ ವೇಳೆ ನಾಲ್ವರು ವಿದ್ಯಾಥಿಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಮೃತರನ್ನು ಏಕಲವ್ಯ ಸಿಂಗ್ (18), ಇಶಾಂತ್ ಯಾದವ್ (19), ಆಕಾಶ್ ಧರ್ಮದಾಸ್ (26) ಮತ್ತು ರಣತ್ ಮಹದು ಬಂದಾ (18) ಎಂದು ಗುರುತಿಸಲಾಗಿದೆ. ಜಲಾಶಯದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಓರ್ವ ವಿದ್ಯಾರ್ಥಿ ಮುಳುಗಿದ್ದಾನೆ. ಈ ವೇಳೆ ಆತನನ್ನು ರಕ್ಷಿಸಲು ಯತ್ನಿಸಿದ ಮೂವರು ಸ್ನೇಹಿತರು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಮುಂಬೈನ ಬಾಂದ್ರಾದ ಖಾಸಗಿ ಕಾಲೇಜಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಣೆಕಟ್ಟಿಗೆ ಮೂವತ್ತೇಳು ವಿದ್ಯಾರ್ಥಿಗಳು ಹೋಗಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ರಕ್ಷಣಾ ತಂಡದ ನೆರವಿನಿಂದ ಮೃತದೇಹಗಳನ್ನು ನೀರಿನಿಂದ ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

You cannot copy content from Baravanige News

Scroll to Top