ಮಾವುತನನ್ನು ಕಾಲಿನಿಂದ ತುಳಿದು ಸಾಯಿಸಿದ ಆನೆ.. ಭಯಾನಕವಾಗಿದೆ ಈ ದೃಶ್ಯ

ಕೇರಳ: ಸಾಕಾನೆಯೊಂದು ಮಾವುತನನ್ನು ತುಳಿದು ಭೀಕರವಾಗಿ ಕೊಂದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂದಹಾಗೆಯೇ ಈ ದುರ್ಘಟನೆ ದೇವರನಾಡು ಕೇರಳದಲ್ಲಿ ನಡೆದಿದೆ.

ಕೇರಳದ ಕಲ್ಲರ್​ನಲ್ಲಿ ಆನೆ ಮಾವುತನನ್ನು ತುಳಿದು ಸಾಯಿಸಿದೆ. ಮೃತರನ್ನು ಬಾಲಕೃಷ್ಣನ್​ (62) ಎಂದು ಗುರುತಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹರಿದಾಡುತ್ತಿದೆ.

ದೃಶ್ಯದಲ್ಲಿ ಕಂಡಂತೆ ಆನೆ ಮಾವುತ ಅಂಕುಶದಿಂದ ಸಲಗದ ಕಾಲಿಗೆ ಹೊಡೆಯುತ್ತಾನೆ. ಇದರಿಂದ ಕೋಪಗೊಂಡ ಆನೆ ಮಾವುತನನ್ನು ನೆಲಕ್ಕೆ ಹಾಕಿ ತನ್ನ ಕಾಲಿನಿಂದ ತುಳಿಯುತ್ತದೆ. ಬಳಿಕ ಸೋಂಡಿಲಿನಿಂದ ಎತ್ತಿ ಕೆಳಕ್ಕೆಸೆಯುತ್ತದೆ. ಆದರೆ ಅಷ್ಟರಲ್ಲಾಗಲೇ ಮಾವುತ ಸಾವನ್ನಪ್ಪಿರುತ್ತಾನೆ.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top