ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಪಾಲಾಗಿದ್ದಾರೆ.
ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ದರ್ಶನ್ ಅವರನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಮಹತ್ವದ ಆದೇಶ ನೀಡಿದೆ.
ದರ್ಶನ್ ಸೇರಿ ನಾಲ್ಕು ಆರೋಪಿಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಇಂದು 24ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರು ಪಡಿಸಿದ್ದರು. ತನಿಖಾಧಿಕಾರಿ ಚಂದನ್ ಅವರು ಆರೋಪಿಗಳಾದ ದರ್ಶನ್, ವಿನಯ್, ಧನರಾಜ್ & ಪ್ರದೂಶ್ ಅವರನ್ನು ಕೋರ್ಟ್‌ಗೆ ಕರೆದು ಕೊಂಡು ಬಂದಿದ್ದರು.
24ನೇ ಎಸಿಎಂಎಂ ಕೋರ್ಟ್‌ನಲ್ಲಿ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಮತ್ತವರ ತಂಡ ಹಾಜರಿತ್ತು. ದರ್ಶನ್ & ಇತರ ನಾಲ್ಕು ಆರೋಪಿಗಳ ವಕೀಲರು ಹಾಜರಿದ್ದರು. ಕೋರ್ಟ್‌ನಲ್ಲಿ ಜಡ್ಜ್ ನಿಮಗೆ ಕಸ್ಟಡಿಯಲ್ಲಿ ಏನಾದ್ರೂ ತೊಂದರೆ ಆಯ್ತಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ದರ್ಶನ್ ಅವರು ಇಲ್ಲ ಸ್ವಾಮಿ ಯಾವುದೇ ತೊಂದರೆ ಆಗಿಲ್ಲ ಎಂದರು.
ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದ್ರಾ. ನಿಮಗೆ ಏನಾದ್ರೂ ಮೆಡಿಕಲ್ ಟ್ರೀಟ್ಮೆಂಟ್ ಅವಶ್ಯಕತೆ ಇದೆಯಾ ಎಂದು ನ್ಯಾಯಾಧೀಶರು ಕೇಳಿದಕ್ಕೆ ಹೌದು ಬೆಳಗ್ಗೆ ಸ್ಟೇಷನ್‌ನಲ್ಲಿ ಮಾಡಿಸಿದ್ರು. ಬೇರೆ ಟ್ರೀಟ್ಮೆಂಟ್ ಅವಶ್ಯಕತೆ ಇಲ್ಲ ಸ್ವಾಮಿ ಎಂದ ದರ್ಶನ್ ಹೇಳಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ನಟ ದರ್ಶನ್ ಅವರನ್ನು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದಿನಿಂದ 13 ದಿನ ಪರಪ್ಪನ ಅಗ್ರಹಾರ ಜೈಲುವಾಸದಲ್ಲಿರಬೇಕಾಗಿದೆ.
ಎರಡನೇ ಬಾರಿ ಜೈಲು ಪಾಲು
ಇಂದು ನಟ ದರ್ಶನ್ ಅವರು ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿದ್ದ ಕೇಸ್ನಲ್ಲಿ ದರ್ಶನ್ ಜೈಲು ಪಾಲಾಗಿದ್ದರು. ಇಂದು ಕೋರ್ಟ್ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ 2ನೇ ಬಾರಿ ಸೆಂಟ್ರಲ್ ಜೈಲು ಸೇರಿಕೊಳ್ಳಲಿದ್ದಾರೆ.