ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್.. ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ!

ಬೆಂಗಳೂರು : ನಂದಿನಿ ಹಾಲಿನ ದರವನ್ನು ಕೆಎಂಎಫ್ ಪ್ರತಿ ಲೀಟರ್ಗೆ 2 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ. ಇಷ್ಟು ದಿನ ಪ್ರತಿ ಲೀಟರ್ಗೆ 42 ರೂಪಾಯಿ ಇದ್ದ ಹಾಲಿನ ದರ ಇನ್ಮುಂದೆ 44 ರೂಪಾಯಿ ಆಗಲಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೆಎಂಎಫ್) ಮುಖ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಲಾಯಿತು. ಇಷ್ಟು ದಿನ ಒಂದು ಲೀಟರ್ ಹಾಲು 42 ರೂಪಾಯಿ ಇತ್ತು. ಆದರೆ ಈ ಬೆಲೆಯಲ್ಲಿ 2 ರೂಪಾಯಿಯನ್ನು ಹೆಚ್ಚಳ ಮಾಡಲಾಗಿದ್ದು, ಇನ್ಮುಂದೆ ಪ್ರತಿ ಲೀಟರ್ ಹಾಲು 44 ರೂಪಾಯಿ ಆಗಲಿದೆ. ಅದರಂತೆ ಅರ್ಧ ಲೀಟರ್ ಹಾಲು 22 ಇತ್ತು. ಇದರಲ್ಲೂ 2 ರೂಪಾಯಿಯನ್ನ ಏರಿಕೆ ಮಾಡಲಾಗಿದ್ದು 24 ರೂಪಾಯಿ ಆಗಲಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಇನ್ಮುಂದೆ ಪ್ರತಿ ಪಾಕೆಟ್ನಲ್ಲಿ 1 ಲೀಟರ್ ಹಾಲಿನ ಬದಲಿಗೆ 1050 ಎಂಎಲ್ ಹಾಲು ಇರುತ್ತದೆ. ಅದರಂತೆ ಅರ್ಧ ಲೀಟರ್ ಹಾಲಿನ ಪಾಕೆಟ್ ಬದಲಿಗೆ 550 ಎಂಎಲ್ ಹಾಲು ಬರುತ್ತದೆ. ಪ್ರತಿ ಹಾಲಿನ ಪಾಕೆಟ್ 50 ಎಂಎಲ್ ಹೆಚ್ಚುವರಿ ಹಾಲನ್ನು ಹೊಂದಿರುತ್ತದೆ. ಹೀಗಾಗಿಯೇ ಹಾಲಿನ ದರದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.

Scroll to Top