ಟಿಕ್‌ಟಾಕ್ (TikTok) ನಿಷೇಧವಾದ ಬಳಿಕ ಭಾರತದಲ್ಲಿ ಇನ್ಸ್ಟಾ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಇದರಲ್ಲಿರುವ ರೀಲ್ಸ್ ಆಯ್ಕೆಗೆ ಜನರು ಮನಸೋತರು. ಟಿಕ್‌ಟಾಕ್ ಬಳಿಕ ಈಗ ಹೆಚ್ಚಿನ ಜನರು ಇನ್‌ಸ್ಟಾಗ್ರಾಮ್ ರೀಲ್ಸ್ಗೆ ಅಂಟಿಕೊಂಡು ಬಿಟ್ಟಿದ್ದಾರೆ. ಇದಕ್ಕೆ ತಕ್ಕಂತೆ ಇನ್‌ಸ್ಟಾಗ್ರಾಮ್ (Instagram) ತನ್ನ ರೀಲ್ಸ್‌ನಲ್ಲಿ ಹಲವು ಆಕರ್ಷಕ ಫೀಚರ್ಗಳನ್ನು ಕೂಡ ಪರಿಚಯಿಸುತ್ತಾ ಬರುತ್ತಿದೆ.
ಆದರೆ, ಕೆಲವರು ತಮ್ಮ ಇನ್ಸ್ಟಾದಲ್ಲಿ ಫೋಟೋ, ವಿಡಿಯೋ ಎಷ್ಟೇ ಹಾಕಿದರೂ ಅದಕ್ಕೆ ಲೈಕ್ಸ್, ಕಮೆಂಟ್ ಬರುವುದೇ ಇಲ್ಲ. ಹಾಗಾದರೆ ನಿಮ್ಮ ಪೋಸ್ಟ್ಗೆ ಹೆಚ್ಚು ಲೈಕ್ಸ್, ವೀವ್ಸ್, ಕಮೆಂಟ್ ಬರಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಟಿಪ್ಸ್.
ನೀವು ಫೇಸ್ಬುಕ್ ಖಾತೆ ಹೊಂದಿದ್ದರೆ ಮೊದಲು ಇನ್‌ಸ್ಟಾಗ್ರಾಂಗೆ ಲಿಂಕ್ ಮಾಡಿ. ಯಾಕೆಂದರೆ ನೀವು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಚಿತ್ರಗಳು, ವಿಡಿಯೋಗಳಲ್ಲದೆ, ನಿಮ್ಮ ಸ್ಟೋರಿಗಳನ್ನು ಫೇಸ್ಬುಕ್ನಲ್ಲಿ ಕೂಡ ಶೇರ್ ಮಾಡಿಕೊಳ್ಳಬಹುದು. ಫೇಸ್ಬುಕ್ ತಾಣದಲ್ಲಿರುವ ಯಾವುದೇ ಸ್ನೇಹಿತರು ಇನ್‌ಸ್ಟಾಗ್ರಾಮ್ ಸೇರಿದಾಗ ನಿಮಗೂ ನೋಟಿಫಿಕೇಶನ್ ಬರುತ್ತಾ ಇರುತ್ತದೆ. ಹೀಗಾಗಿ ಅವರ ಬಳಿ ನಿಮ್ಮನ್ನ ಫಾಲೋ ಮಾಡುವಂತೆ ಕೂಡ ಹೇಳಬಹುದು.
ಈಗ ಇನ್‌ಸ್ಟಾಗ್ರಾಮ್ ಸಾಕಷ್ಟು ಅಪ್ಡೇಟ್ ಆಗಿದ್ದು, ನೀವು ಯಾವುದೇ ಫೋಟೋ, ವಿಡಿಯೋ ಹಂಚಿಕೊಂಡರೆ ಫೇಸ್ಬುಕ್ನಲ್ಲಿ ಅಟೋಮೆಟಿಕ್ ಶೇರ್ ಆಗುವಂತಹ ಆಯ್ಕೆ ಕೂಡ ಇದೆ.ಇನ್ನು ಇನ್ಸ್ಟಾಗ್ರಾಮ್ನಲ್ಲಿ ನೀವು ಯಾವುದೇ ಫೈಲ್ ಅನ್ನು ಶೇರ್ ಮಾಡುವಾಗ ಸರಿಯಾದ ಸಮಯಕ್ಕೆ ಮಾಡಿ.
ಒಂದೇ ಬಾರಿಗೆ 2, 3 ವಿಡಿಯೋ ಹಂಚಿಕೊಂಡರೆ ಲೈಕ್ಸ್, ಕಮೆಂಟ್ ಹಾಗೂ ಹೆಚ್ಚು ರೀಚ್ ಕೂಡ ಆಗುವುದಿಲ್ಲ. ಈ ಬಗ್ಗೆ ವೆಬ್ ತಾಣ ಗಿಜ್ಬಾಟ್ ವರದಿ ಮಾಡಿದ್ದು ಇನ್ಸ್ಟಾಗ್ರಾಮ್ನಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳಲು ದಿನದಲ್ಲಿ ಯಾವುದು ಸರಿಯಾದ ಸಮಯ ಎಂದು ಹೇಳಿದೆ.
ಇವರು ಹೇಳಿರುವ ಪ್ರಕಾರ ಸೋಮವಾರ ಮಧ್ಯಾಹ್ನ 3:30, ಸಂಜೆ 7:30 ಹಾಗೂ ಬೆಳಗ್ಗೆ 7:30 ಉತ್ತಮ ಸಮಯವಂತೆ. ಅಂತೆಯೆ ಮಂಗಳವಾರ ಫೋಟೋ ಅಥವಾ ರೀಲ್ಸ್ ಹಂಚಿಕೊಳ್ಳುವ ಪ್ಲಾನ್ನಲ್ಲಿದ್ದರೆ ನೀವು 11:30 am, 1:30 am, 6:30 am. ಬುಧವಾರ- 4:30 pm, 5:30 pm, 8:30 am, ಗುರುವಾರ- 6:30 pm, 9:30 am, 4:30 am (ಮುಂದಿನ ದಿನ), ಶುಕ್ರವಾರ- 2:30 pm, 10:30 pm, 12:30 am (ಮುಂದಿನ ದಿನ), ಶನಿವಾರ- 8:30 pm, 4:30 am (ಮುಂದಿನ ದಿನ), 5:30 am (ಮುಂದಿನ ದಿನ), ಭಾನುವಾರ- 4:30 pm, 5:30 pm, 1:30 am (ಮುಂದಿನ ದಿನ).
ಒಂದೇ ರೀತಿಯ ಫೋಟೋವನ್ನು ಪುನಃ ಪೋಸ್ಟ್ ಮಾಡಬೇಡಿ. ಯಾವುದಾದರೂ ಒಂದು ಪೋಟೊ ಚೆನ್ನಾಗಿದ್ದರೆ, ಆ ಫೋಟೋವನ್ನೇ ಹತ್ತು ಬಾರಿ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಬೇಡಿ. ಗಮನ ಸೆಳೆಯುವಂತಹ ಗುಣಮಟ್ಟದ ಚಿತ್ರಗಳನ್ನು ಮಾತ್ರ ಶೇರ್ ಮಾಡಿ. ದಿನಕ್ಕೆ ಹೆಚ್ಚೆಂದರೆ 2 ರಿಂದ 3 ಫೋಟೋಗಳನ್ನು ಶೇರ್ ಮಾಡುವುದು ಉತ್ತಮ.