ಪ್ರವಾಸಿಗರ ಕಣ್ಣೆದುರೇ ನೀರಿನಲ್ಲಿ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ

ಮುಂಬೈ, ಜು.01: ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಇಬ್ಬರು ನಾಪತ್ತೆಯಾಗಿರುವ ಘಟನೆ
ಮುಂಬೈ ಸಮೀಪದ ಲೋನಾವಾಲಾ ಜಲಪಾತದಲ್ಲಿ ಭಾನುವಾರ ಸಂಭವಿಸಿದೆ.

ಮೃತರನ್ನು ಪುಣೆ ಮೂಲದ ಶಾಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13) ಮತ್ತು ಉಮೇರಾ ಅನ್ಸಾರಿ (8) ಎನ್ನಲಾಗಿದ್ದು. ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸೈಯದ್ (9) ನಾಪತ್ತೆಯಾಗಿದ್ದಾರೆ.

ಭಾನುವಾರ ಪುಣೆ ನಗರದ ಸೈಯದ್ ನಗರ ಮೂಲದ ಕುಟುಂಬವೊಂದು ರಜಾದಿನವಾಗಿದ್ದರಿಂದ ಕುಟುಂಬದ ಏಳು ಮಂದಿ ಸದಸ್ಯರು ಮುಂಬೈಯಿಂದ 80 ಕಿ.ಮೀ ದೂರದಲ್ಲಿರುವ ಭೂಶಿ ಅಣೆಕಟ್ಟಿನ ಹಿನ್ನೀ ರಿನ ಲೋನಾವಾಲಾ ಜಲಪಾತ ಬಳಿ ಬಂದಿದ್ದಾರೆ.

ಈ ವೇಳೆ ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ಕುಟುಂಬ ಸದಸ್ಯರು ನೀರಿನ ನಡುವೆ ಆಟವಾಡಲು ತೆರಳಿದ್ದಾರೆ. ದುರದೃಷ್ಟವಶಾತ್ ಈ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸರಿಯುತ್ತಿರುವ ಮಳೆಯಿಂದ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು ಪರಿಣಾಮ ಹಿನ್ನೀ ರಿನ ಮಟ್ಟ ಏರಿಕೆಯಾಗಿದೆ ಹಾಗಾಗಿ ಏಕಾಏಕಿ ಜಲಪಾತದ ಬಳಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಏಳು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ .ಈ ವೇಳೆ ಇಬ್ಬರು ದಡ ಸೇರಿ ಬಚಾವಾಗಿದ್ದು ಐವರು ನಿರುಪಾಲಾಗಿದ್ದರೆ. ಇದರಲ್ಲಿ ಮೂವರ ಮೃತ ದೇಹ ಭಾನುವಾರ ಪತ್ತೆಯಾಗಿದ್ದು ಇಬ್ಬರು ನಾಪತ್ತೆಯಾಗಿದ್ದರು ಅವರ ಮೃತದೇಹ ಪತ್ತೆ ಕಾರ್ಯಾಚರಣೆ ಇಂದು ನಡೆಸುವುದಾಗಿ ರಕ್ಷಣಾ ತಂಡ ತಿಳಿಸಿದೆ.

You cannot copy content from Baravanige News

Scroll to Top