ಹೊಸ ಸಿನಿಮಾದ ಶೂಟಿಂಗ್‌ಗೂ ಮುನ್ನ ಕೊರಗಜ್ಜ ಸನ್ನಿಧಾನಕ್ಕೆ ರಕ್ಷಿತ್ ಶೆಟ್ಟಿ ಭೇಟಿ

ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹೊಸ ಚಿತ್ರಕ್ಕೆ ಚಾಲನೆ ನೀಡುವ ಮುನ್ನ ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ಕೊಟಿದ್ದಾರೆ.

ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಸಿನಿಮಾ ಸಕ್ಸಸ್ ನಂತರ ಹೊಸ ಸಿನಿಮಾದ ಕೆಲಸದಲ್ಲಿ ರಕ್ಷಿತ್‌ ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ‘ರಿಚರ್ಡ್ ಆ್ಯಂಟನಿ’ ಚಿತ್ರವನ್ನು ನಟಿಸೋದರ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಈ ಮಧ್ಯೆ ಉಡುಪಿಯ ಬೈಲೂರಿನ ನೀಲಕಂಠ ಬಬ್ಬು ಸ್ವಾಮಿ ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹುಟ್ಟೂರಿಗೆ ಹೋದಾಗಲೆಲ್ಲಾ ದೈವ ದೇವಸ್ಥಾನಗಳಿಗೆ ರಕ್ಷಿತ್ ಭೇಟಿ ನೀಡುತ್ತಲೇ ಇರುತ್ತಾರೆ. ಹೊಸ ಕೆಲಸಕ್ಕೆ ಕೈಹಾಕುವ ಮುನ್ನ ದೈವಕ್ಕೆ ಪ್ರಾರ್ಥನೆ ಮಾಡಿ ಮುಂದುವರೆಯುತ್ತಾರೆ.

ಇದಷ್ಟೇ ಅಲ್ಲ, ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಹೊಸಬರಿಗೆ ಅವಕಾಶ ಕೊಡ್ತಿದ್ದಾರೆ. ಹೊಸ ಪ್ರತಿಭೆಗಳ ಸಿನಿಮಾಗೆ ನಿರ್ಮಾಣ ಮಾಡಿದ್ದಾರೆ ರಕ್ಷಿತ್ ಶೆಟ್ಟಿ. ಸದ್ಯ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ಹಾಡು, ಪೋಸ್ಟರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

You cannot copy content from Baravanige News

Scroll to Top