ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳೋ ಕಾಮುಕರೇ ಹುಷಾರ್ : ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!

ನವದೆಹಲಿ : ಇಂದಿನಿಂದಲೇ ದೇಶಾದ್ಯಂತ ಮೂರು ಹೊಸ ಅಪರಾಧ ಕಾನೂನುಗಳು ಜಾರಿಗೊಳಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಐಪಿಸಿ ಬದಲಿಗೆ ಸಿಆರ್‌ಪಿಸಿ ಜಾರಿಗೊಳಿಸುವ ಮೂಲಕ ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ ಅಂತ್ಯವಾಡಿದೆ.

ಇನ್ನು, ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳನ್ನು ಬದಲಿಸಲಾಗಿದೆ. ಇವುಗಳನ್ನು ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳನ್ನು ರೂಪಿಸಿದೆ. ಜುಲೈ 1ನೇ ತಾರೀಕು ಎಂದರೆ ಇಂದಿನಿಂದಲೇ ಈ ಹೊಸ ಕಾನೂನುಗಳು ಜಾರಿಯಲ್ಲಿವೆ.

ಯಾರಾದ್ರೂ ಮೋಸ, ವಂಚನೆ, ಸುಳ್ಳು ಭರವಸೆ ನೀಡಿ ಲೈಂಗಿಕ ಸಂಬಂಧ ಹೊಂದಿದ್ರೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಉದ್ಯೋಗ ಕೊಡಿಸೋ ನೆಪದಲ್ಲಿ ಮತ್ತು ಮದುವೆ ಆಗುತ್ತೇನೆ ಎಂದು ಸುಳ್ಳು ಹೇಳಿ ಲೈಂಗಿಕವಾಗಿ ಬಳಸಿಕೊಂಡ್ರೆ ಜೈಲು ಗ್ಯಾರಂಟಿ. ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಹೊಸ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.

IPC ಬದಲಿಗೆ BNS, CRPC ಬದಲಿಗೆ BNSS ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಿಗೆ ಬಿಎಸ್ಎ ಕಾಯ್ದೆಗಳು ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಪ್ರಮುಖ ಅಂಶಗಳನ್ನು ಬದಲಾವಣೆ ಆಗಿವೆ. ಜೊತೆಗೆ ಕೆಲವು ಹೊಸ ವಿಚಾರಗಳನ್ನೂ ಸೇರಿಸಲಾಗಿದೆ. ನೂತನ ಕಾನೂನು ಶಿಕ್ಷೆಗಿಂತ ಹೆಚ್ಚು ನ್ಯಾಯಕ್ಕೆ ಕೇಂದ್ರಿಕೃತವಾಗಿದೆ. ಅದರಲ್ಲಿ ಪ್ರಮುಖವಾಗಿರೋದು ಏನೆಂದರೆ ಝೀರೋ ಎಫ್.ಐ.ಆರ್ ಕಾನ್ಸೆಪ್ಟ್.

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸಾಮೂಹಿಕ ಅತ್ಯಾಚಾರದ ಅಪರಾಧಿಗೆ 20 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಅಪ್ತಾಪ್ತೆ ಮೇಲೆ ಗ್ಯಾಂಗ್ ರೇಪ್ ಮಾಡಿದರೆ ಮರಣದಂಡನೆ ಶಿಕ್ಷೆ ನೀಡುವ ಅವಕಾಶ ಇದೆ. ಲೈಂಗಿಕ ಕ್ರಿಯೆಗಾಗಿ ಸುಳ್ಳು ಭರವಸೆ ನೀಡುವುದು ಕೂಡ ಅಪರಾಧವಾಗಿದೆ. ಗುರುತು ಮರೆಮಾಚಿ ಆಕೆಯನ್ನು ಬಳಸಿಕೊಳ್ಳುವುದು ಕೂಡ ಕ್ರೌರ್ಯ ಎಂದು ಪರಿಗಣಿಸಲಾಗಿದೆ.

ಪೊಲೀಸರು ತನಿಖೆ ವೇಳೆ ಅತ್ಯಾಚಾರದ ಸಂತ್ರಸ್ತೆಯನ್ನು ತನಿಖೆಗೆ ಒಳಪಡಿಸುವಾಗ ಆಕೆಯ ಮನೆಯಲ್ಲೇ ಹೇಳಿಕೆ ದಾಖಲು ಮಾಡಿಕೊಳ್ಳಬೇಕು. ಆಕೆಯ ಪೋಷಕರ ಸಮ್ಮುಖದಲ್ಲೇ ಹೇಳಿಕೆ ದಾಖಲು ಮಾಡಿಕೊಳ್ಳಬೇಕು. ಇನ್ನೊಂದು ವಿಚಾರ ಏನೆಂದರೆ ಸಂತ್ರಸ್ತೆ ತನ್ನ ಹೇಳಿಕೆಯನ್ನು ಆನ್ ಲೈನ್ ಮೂಲಕವೂ ನೀಡಬಹುದು.

ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ 7 ದಿನದಲ್ಲಿ ತನಿಖಾ ವರದಿ ಮಾಡಬೇಕು. ದೂರು ದಾಖಲಾದ 7 ದಿನಗಳಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ವೈದ್ಯರು 7 ದಿನಗಳಲ್ಲಿ ವೈದ್ಯಕೀಯ ವರದಿ ಸಲ್ಲಿಸಬೇಕು ಎಂಬ ಕಾನೂನು ಜಾರಿಗೆ ತರಲಾಗಿದೆ.

Scroll to Top