ಉಡುಪಿ : ಜಿಲ್ಲೆಯಲ್ಲಿ ಬೈಂದೂರಿನಲ್ಲಿ ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಚಿದೆ. ಬೈಂದೂರಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಪಡುವ ಕಷ್ಟದ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
ಉಡುಪಿ ಜಿಲ್ಲೆಯಲ್ಲಿ ಮುಂಗಾರುಮಳೆ ಅಬ್ಬರ ಜೋರಾಗಿದ್ದು, ಈಗಾಗಲೇ ಹಲವು ಹೊಳೆ ನದಿಗಳು ತುಂಬಿ ಹರಿಯುತ್ತಿದೆ. ಬೈಂದೂರಿನ ಗೋಳಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕಡಕೆಯಲ್ಲಿ ಹೆಚ್ಚಾಗಿ ಮರಾಠ ಜನಾಂಗ ವಾಸವಾಗಿದ್ದಾರೆ. ಇಲ್ಲಿ ಮಳೆಗಾಳದ ಸಂದರ್ಭ ಮಕ್ಕಳನ್ನು ಶಾಲೆಗೆ ಕಳುಹಿಸಲು ಅವರನ್ನು ಎತ್ತಿಕೊಂಡು ತುಂಬಿ ಹರಿಯುವ ಹೊಳೆಗಳನ್ನು ದಾಟಬೇಕಾದ ಸ್ಥಿತಿ ಇದೆ.
ಈ ಪರಿಸರದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಂತಿದೆ ಈ ಗ್ರಾಮ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೋಷಕರು ಯಾವ ರಿಸ್ಕ್ ಬೇಕಾದ್ರು ತೆಗೆದುಕೊಳ್ಳಬೇಕಿದೆ. ಆದರೆ ಕೊಂಚ ಯಾಮಾರಿದರೂ ಅನಾವುತ ಕಟ್ಟಿಟ್ಟಬುತ್ತಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.