ಶಿರ್ವ : ಕುಡಿತದ ಚಟ ಹೊಂದಿದ್ದ ಸುಮಾರು 35 ವರ್ಷ ಪ್ರಾಯದ ಅಪರಿಚಿತ ಕೂಲಿ ಕಾರ್ಮಿಕನೋರ್ವ ಕುಡಿತದ ಮತ್ತಿನಲ್ಲಿ ಶಿರ್ವ ಮಹಿಳಾ ಸೌಧದ ಹಿಂಬದಿಯ ತಗಡು ಶೀಟಿನ ಮಾಡಿನ ಜಂತಿಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.1 ರಂದು ಸಂಜೆ ನಡೆದಿದೆ.
ಮೃತ ವ್ಯಕ್ತಿ ಹಾವೇರಿ ಮೂಲದ ಯಲ್ಲಪ್ಪ ಎಂದು ತಿಳಿದು ಬಂದಿದ್ದು, ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.