ಬಂಟಕಲ್ಲು: ಶಿಕ್ಷಕಿ ಸಂಗೀತ ಪಾಟ್ಕರ್ ರವರಿಗೆ ಅಂತರಾಷ್ಟ್ರೀಯ ರೋಟರಿಯಿಂದ NATION BUILDER AWARD ಪ್ರಶಸ್ತಿ

ಬಂಟಕಲ್ಲು: ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾರ್ಥಮಿಕ ಶಾಲೆಯ ಗೌರವ ಶಿಕ್ಷಕಿ ಶ್ರೀಮತಿ ಸಂಗೀತ ಪಾಟ್ಕರ್ ರವರಿಗೆ ಅಂತರಾಷ್ಟ್ರಿಯ ರೋಟರಿಯು, ಶಿಕ್ಷಕ ವೃತ್ತಿಯಲ್ಲಿರುವ ಆಯ್ದ ಶಿಕ್ಷಕರಿಗೆ ಕೊಡಮಾಡುವ NATION BUILDER AWARD ಷ್ರಶಸ್ತಿಯನ್ನು ನೀಡಲಾಗಿದೆ.

ಉಡುಪಿ ಕಿದಿಯೂರು ಹೋಟೆಲ್ ನಲ್ಲಿ ರೋಟರಿ ಜಿಲ್ಲೆ ಹಾಗೂ ರೋಟರಿ ಜಿಲ್ಲಾ ಸಾಕ್ಷರತಾ ಸಮಿತಿ ಆಶ್ರಯದಲ್ಲಿ ನಡೆದ ರಾಷ್ಟ್ರಿಯ ಹೂಸ ಶಿಕ್ಷಣ ನೀತಿ ಕಾರ್ಯಗಾರ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್, ರೊ. ಡಾ ಜಯಗೌರಿಯವರು ಪ್ರಧಾನ ಮಾಡಿದರು. ಶಿರ್ವ ರೋಟರಿ ಸಂಸ್ಥೆಯ ಶಿಫಾರಸಿನೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಕೆ ಆರ್ ಪಾಟ್ಕರ್ ರವರ ಪತ್ನಿಯಾಗಿರುವ ಸಂಗೀತ ಪಾಟ್ಕರ್ ರವರು 23 ವರುಷಗಳಿಂದ ಬಂಟಕಲ್ಲು ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಇವರು ಈ ಶೈಕ್ಷಣಿಕ ವರ್ಷದಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

You cannot copy content from Baravanige News

Scroll to Top