ನವದೆಹಲಿ : ಟಿ20 ವಿಶ್ವಕಪ್ ಗೆದ್ದು ಬೀಗಿದ ಟೀಂ ಇಂಡಿಯಾ ಆಟಗಾರರು ತವರಿಗೆ ಮರಳಿದ್ದು ಅದ್ಧೂರಿ ಸ್ವಾಗತ ಸಿಕ್ಕಿದೆ. ದೆಹಲಿಗೆ ಬಂದಿಳಿದ ಚಾಂಪಿಯನ್‌ ತಂಡವನ್ನ ಬಿಸಿಸಿಐ ಆತ್ಮೀಯವಾಗಿ ಬರಮಾಡಿಕೊಂಡಿದೆ. ವಿಶ್ವಕಪ್‌ ಗೆದ್ದು ಭಾರತಕ್ಕೆ ಬಂದಿರುವ ಆಟಗಾರರನ್ನ ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಗೌರವಿಸಿದ್ದಾರೆ.

ಇಂದು ಬೆಳಗ್ಗೆ ಸೌಥ್ ಆಫ್ರಿಕಾದಿಂದ ಬಂದ ಟೀಂ ಇಂಡಿಯಾ ಆಟಗಾರರನ್ನ ಪ್ರಧಾನಿ ಮೋದಿ ಅವರು ಭೇಟಿಯಾದರು.

ನವದೆಹಲಿಯ ಪ್ರಧಾನಿ ನಿವಾಸದಲ್ಲಿ ಭಾರತ ತಂಡಕ್ಕೆ ಬ್ರೇಕ್‌ ಫಾಸ್ಟ್ ಆಯೋಜಿಸಲಾಗಿತ್ತು. ಟೀಂ ಇಂಡಿಯಾ ಆಟಗಾರರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ ಅವರು ಚಾಂಪಿಯನ್‌ಗಳಿಗೆ ಶುಭಾಶಯ ಕೋರುವುದರ ಜೊತೆ ಖುಷಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ.

ಕ್ಯಾಪ್ಟನ್‌ ರೋಹಿತ್ ಶರ್ಮಾ ಅವರ ತಂಡ ವಿಶ್ವಕಪ್‌ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಪ್ರತಿಯೊಬ್ಬ ಆಟಗಾರರಿಗೂ ಶುಭಾಶಯ ತಿಳಿಸಿದ ನರೇಂದ್ರ ಮೋದಿ ಅವರು ವಿಶ್ವಕಪ್ ಜೊತೆ ಫೋಟೋಗೆ ಪೋಸ್ ಕೊಟ್ಟರು.

ಟೀಂ ಇಂಡಿಯಾ ಆಟಗಾರರ ಜೊತೆ ಗಂಟೆಗೂ ಹೆಚ್ಚು ಕಾಲ ಕಳೆದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕಪ್ ಗೆದ್ದ ಕ್ಷಣಗಳ ಬಗ್ಗೆ ಮಾತನಾಡಿದರು. ಮುಂದಿನ ಸರಣಿಗಳನ್ನು ಗೆಲ್ಲುವ ಬಗ್ಗೆ ಆಟಗಾರರ ಜೊತೆ ನರೇಂದ್ರ ಮೋದಿ ಚರ್ಚೆ ನಡೆಸಿದರು. ರಾಹುಲ್ ದ್ರಾವಿಡ್, ಜಸ್ಪ್ರೀತ್ ಬೂಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಜೊತೆ ಸೇರಿ ಎಲ್ಲಾ ಆಟಗಾರರ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ.

Baravanige News

Translate »

You cannot copy content from Baravanige News

Scroll to Top