ವ್ಲಾಗ್ ಮಾಡೋ ಹುಚ್ಚು.. ಪತ್ನಿ ಜೊತೆಗಿನ ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡ ವರ!

ಸಾಮಾಜಿಕ ಜಾಲತಾಣಗಳ ಗೀಳು ಯುವಜನರನ್ನು ಕಾಡುತ್ತಿದೆ. ಅದರಲ್ಲೂ ಕೆಲವರಂತೂ ಊಟ, ನಿದ್ದೆ ಬೇಕಾದರೆ ಬಿಡುವೆವು ಆದರೆ ರೀಲ್ಸ್, ವ್ಲಾಗ್ ಮಾತ್ರ ಬಿಡೆವು ಎಂಬವವರು ಇದ್ದಾರೆ. ಆದರೆ ಈ ಮಿತಿ ಮೀರಿದ ವರ್ತನೆಯಿಂದ ಮಾನ, ಮರ್ಯಾದೆ ಕಳೆದುಕೊಳ್ಳುವ ಪ್ರಸಂಗವು ಎದುರಾದದ್ದು ಇದೆ. ಇದೀಗ ಅದಕ್ಕೆ ಉದಾಹರಣೆ ಎಂಬಂತೆ ವ್ಲಾಗರ್ ಒಬ್ಬ ತನ್ನ ಫಸ್ಟ್ ನೈಟ್ ವಿಡಿಯೋವನ್ನ ಹಂಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಸದ್ಯ ನವ ಜೋಡಿಗಳು ಟ್ರೋಲ್ ಆಗುತ್ತಿದ್ದಾರೆ. ಅನೇಕರು ವಿಡಿಯೋ ಹಂಚಿಕೊಳ್ಳುವ ಮೂಲಕ ದಂಪತಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಹಲವರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆಯೇ ವರನು ತನ್ನ ಮದುವೆಯ ಮೊದಲ ರಾತ್ರಿಯ ವಿಡಿಯೋ ಮಾಡಿದ್ದಾನೆ. ವಧುವಿನ ಬಳಿ ನಮ್ಮ ಮದುವೆಯ ರಾತ್ರಿ ಹೇಗಿತ್ತು? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ವಧು ನೀನು ಈಗ ಎಲ್ಲಿದ್ದೀಯಾ? ಎಂದು ಕೇಳುತ್ತಾಳೆ. ಬಳಿಕ ವರ ಫಸ್ಟ್ ನೈಟ್ಗೆ ಅಲಂಕರಿಸಿದ ಹೂ, ಹಾಸಿಗೆಯನ್ನು ವಿಡಿಯೋದಲ್ಲಿ ತೋರಿಸುತ್ತಾನೆ.

ಟ್ವಿಟ್ಟರ್ ಬಳಕೆದಾರರಾದ ಸನಂದಾ ರಾಯ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋಗೆ ಇದು ಸುಹಾಗ್ರತ್ ವ್ಲಾಗ್. ಈ ವ್ಲಾಗರ್ ಸಂಪೂರ್ಣ ಹುಚ್ಚರಾಗಿದ್ದಾರೆ. ಜೊತೆಗೆ ಬ್ಲರ್ ಮಾಡಿರುವ ಕ್ಲಿಪ್ಗಾಗಿ ನಿರೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.

ಎಕ್ಸ್ನಲ್ಲಿ ಈ ವಿಡಿಯೋ ಕಂಡತೆ ಅನೇಕರು ನವ ಜೋಡಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಲವಾರು ಮಂದಿ ಇಂಥಾ ಸಾಮಾಜಿಕ ಜಾಲತಾಣದ ಗೀಳಿನ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಗೀಳು ಮನೆಯ ಬೆಡ್ ರೂಂವರೆಗೂ ತಲುಪಿರುವುದು ವಿಪರ್ಯಾಸ. ಅದರಲ್ಲೂ ದೈನಂದಿನ ದಿನಚರಿಯಂತೆ ವ್ಲಾಗ್ ಮಾಡುತ್ತಾ ಆದಾಯದ ಮೂಲಕ್ಕಾಗಿ ಇಂತಹ ಕಂಟೆಂಟ್ ಸಿದ್ಧಪಡಿಸುತ್ತಿರುವುದು ಆಘಾತಕಾರಿ.

https://twitter.com/i/status/1809145106441654293

You cannot copy content from Baravanige News

Scroll to Top