ಶಿರ್ವ: ವಿಜಯಾ ಬ್ಯಾಂಕ್ ನಿವೃತ್ತ ಚೀಫ್ ಮ್ಯಾನೇಜರ್ ಪೆರುವಾಯಿ ಅಡಿವಾಯಿ ಅಂತರಗುತ್ತು ಕೆ. ದಿವಾಕರ ಮಾರ್ಲ (72) ಅವರು ಜು.8 ರಂದು ಶಿರ್ವ ನ್ಯಾರ್ಮ ವಿದ್ಯಾ ಲೇಔಟ್‌ನ ಸಹೋದರನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ತಂದೆ, ತಾಯಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಅವರು ವಿಜಯಾ ಬ್ಯಾಂಕ್‌ನ ದಿಲ್ಲಿ, ಜಮ್ಮು, ಮುಂಬಯಿ, ನಾಗ್ಪುರ, ಚೆನ್ನೈ, ಬೆಂಗಳೂರು ಮತ್ತಿತರ ಶಾಖೆಗಳಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಚೀಫ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದರು.