ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಗಂಭೀರ್ ನೇಮಕ : ಬಿಸಿಸಿಐ ಅಧಿಕೃತ ಘೋಷಣೆ!

ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ಮುಗಿದಿದೆ. ಈಗಾಗಲೇ ಟೀಮ್​ ಇಂಡಿಯಾ ವಿಶ್ವಕಪ್​ ಗೆದ್ದಿದ್ದು, ರಾಹುಲ್​ ದ್ರಾವಿಡ್​ ಕೂಡ ಮುಖ್ಯ ಕೋಚ್​​ ಹುದ್ದೆಗೆ ವಿದಾಯ ಹೇಳಿದ್ದಾರೆ. ಈ ಬೆನ್ನಲ್ಲೇ ಟೀಮ್​​ ಇಂಡಿಯಾ ಮುಖ್ಯ ಕೋಚ್​​ ಆಗಿ ಗೌತಮ್​ ಗಂಭೀರ್​ ಅವರನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಘೋಷಿಸಿದ್ದಾರೆ.

ಈ ಹಿಂದೆಯೇ ರಾಹುಲ್​ ದ್ರಾವಿಡ್​ ಬಳಿಕ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್​ ಆಯ್ಕೆ ಖಚಿತ ಎಂದು ಬಿಸಿಸಿಐ ಮಾಹಿತಿ ನೀಡಿತ್ತು.

ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಗೌತಮ್​ ಗಂಭೀರ್​​​ ಅವರೊಂದಿಗೆ ಮಾತಾಡಿದ್ದು, ದೇಶಕ್ಕಾಗಿ ನಾವು ಈ ಕೆಲಸ ಮಾಡಲೇಬೇಕು ಎಂದು ನಿರ್ಧಾರಕ್ಕೆ ಬಂದಿದ್ದರು ಎಂದು ವರದಿಯಾಗಿತ್ತು. ಈಗ ಕೊನೆಗೂ ಟೀಮ್​ ಇಂಡಿಯಾದ ಹೆಡ್​​ ಕೋಚ್​​ ಆಗಿ ಗೌತಮ್​​ ಗಂಭೀರ್​ ಹೆಸರು ಅನೌನ್ಸ್​ ಮಾಡಲಾಗಿದೆ.

ಇತ್ತೀಚೆಗೆ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​ನಲ್ಲಿ ಕೆಕೆಆರ್​ ತಂಡದ ಮೆಂಟರ್​ ಆಗಿದ್ದರು ಗೌತಮ್​ ಗಂಭೀರ್​. ಮೆಂಟರ್​ ಗೌತಮ್​ ಗಂಭೀರ್​ ಮಾರ್ಗದರ್ಶನದಲ್ಲಿ ಕೆಕೆಆರ್​ ತಂಡವು 3ನೇ ಬಾರಿಗೆ ಐಪಿಎಲ್​ ಚಾಂಪಿಯನ್​ ಆಗಿತ್ತು.

Scroll to Top