Tuesday, September 17, 2024
Homeಸುದ್ದಿಕರಾವಳಿಕಾಣಿಕೆ ಡಬ್ಬಿ ಕದ್ದ ಕಳ್ಳನಿಗೆ ಕುತ್ತು ತಂದ ನಿದ್ದೆ.. ಬಬ್ಬು ಸ್ವಾಮಿಯ ಕಾರ್ಣಿಕಕ್ಕೆ ಬೆರಗಾದ ಭಕ್ತರು!

ಕಾಣಿಕೆ ಡಬ್ಬಿ ಕದ್ದ ಕಳ್ಳನಿಗೆ ಕುತ್ತು ತಂದ ನಿದ್ದೆ.. ಬಬ್ಬು ಸ್ವಾಮಿಯ ಕಾರ್ಣಿಕಕ್ಕೆ ಬೆರಗಾದ ಭಕ್ತರು!

ಉಡುಪಿ : ಬಬ್ಬು ಸ್ವಾಮಿ ದೈವದ ಕಾರ್ಣಿಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಾಣಿಕೆ ಡಬ್ಬಿ ಕದ್ದ ಕಳ್ಳನನ್ನು ದೈವ 24 ಗಂಟೆಯೊಳಗೆ ಹುಡುಕಿಕೊಟ್ಟ ಅಚ್ಚರಿಯ ಘಟನೆ ಉಡುಪಿಯಲ್ಲಿ ನಡೆದಿದೆ.

ಚಿಟ್ಪಾಡಿ ಕಸ್ತೂರ್ಬಾ ನಗರದ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಕಳ್ಳತನ ನಡೆದಿತ್ತು. ಕಳ್ಳನೊಬ್ಬ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಿದ್ದನು. ಜು.5 ರಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು.

ಸಾಮೂಹಿಕ ಪ್ರಾರ್ಥನೆ

ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನಿಸಿದ್ದರು. ಮಾತ್ರವಲ್ಲದೆ, ಊರಿನ ಸಂಕಷ್ಟ ಬಗೆಹರಿಸುವ ದೈವದ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು.

ಭಕ್ತರ ಪ್ರಾರ್ಥನೆಯಿಂದ ಕಳ್ಳನನ್ನು 24 ಗಂಟೆಯೊಳಗೆ ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಅಚ್ಚರಿ ಎಂಬಂತೆ ಜು. 6ರಂದು ಬೆಳಗ್ಗೆ ಕಳ್ಳ ಸಿಕ್ಕಿದ್ದಾನೆ.

ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳ ಮಲಗಿರೋದು ಗೊತ್ತಾಗಿದೆ. ಬಸ್ ನಿಲ್ದಾಣ ಪರಿಸರದಲ್ಲಿ ಆಟೋ ಚಾಲಕರು ಕಳ್ಳನ ಗುರುತು ಪತ್ತೆ ಹಚ್ಚಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳನ ವಿಡಿಯೋ ನೋಡಿದ್ದ ಆಟೋ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಾಗಲಕೋಟೆ ಮೂಲದ ಮುದುಕಪ್ಪ ಕಾಣೆಕೆ ಡಬ್ಬಿ ಕದ್ದು ಸಿಕ್ಕಿಬಿದ್ದ ಕಳ್ಳ. ಈತ ಬಾಗಲಕೋಟೆಗೆ ಹೋಗಬೇಕಾದವನು ಬಸ್ ನಿಲ್ದಾಣದಲ್ಲಿಯೇ ನಿದ್ದೆ ಮಾಡಿ ಬಾಕಿಯಾಗಿದ್ದನು. ಬೆಳಿಗ್ಗೆ ಎಂಟು ಗಂಟೆಯಾದರೂ ನಿದ್ದೆ ಮಂಪರಿನಲ್ಲಿ ಮಲಗಿದ್ದನು.

ಕಳ್ಳತನವೇ ಈತನ ಚಾಳಿ

ಮುದುಕಪ್ಪ ದೈವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿಯನು ಹೊಂದಿದ್ದನು. ಚಿಟ್ಪಾಡಿಯ ನಂತರ ಉದ್ಯಾವರ ಪರಿಸರದಲ್ಲೂ ಕಳ್ಳತನ ಮಾಡಿದ್ದನು. ದೋಚಿದ ಹಣದೊಂದಿಗೆ ಬಾಗಲಕೋಟೆಗೆ ಹೋಗಲು ತಯಾರಿ ನಡೆಸಿದ್ದನು. ಬಸ್ ಸಿಗದ ಕಾರಣ ಮಲಗಿದ್ದಲ್ಲೇ ಬಾಕಿಯಾಗಿದ್ದನು. ಆದರೀಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಭಕ್ತರು ಬಬ್ಬು ಸ್ವಾಮಿ ದೈವದ ಕಾರ್ಣಿಕಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News