ಪಡುಬಿದ್ರಿ: ತಂದೆಯಿಂದಲೇ  ಮಗಳ ಖಾಸಗಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್..!

ಪಡುಬಿದ್ರಿ: ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಿವಿಧ ವಾಟ್ಸಾಪ್‌ ಗುಂಪುಗಳಲ್ಲಿ ತನ್ನ ಮಗಳ ಖಾಸಗಿ ವೀಡಿಯೋಗಳನ್ನು ಹರಿಬಿಟ್ಟ ಆರೋಪದಲ್ಲಿ ತಂದೆ ಆಸೀಫ್‌ ಯಾನೆ ಆಸೀಫ್‌ ಆಪದ್ಭಾಂದವನ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ನಡುವೆ ಆರೋಪಿಯ ಪುತ್ರಿಯ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಚಿನಡ್ಕದ ನಿವಾಸಿ ಆರೋಪಿ ಆಸೀಫ್‌ನ ಮಗಳು ಹಾಗೂ ತೀರ್ಥ ಹಳ್ಳಿಯ ಅವರ ಸಂಬಂಧಿ ತೌಸೀಫ್‌ ಪ್ರೀತಿಸುತ್ತಿದ್ದು, ಇದು ಆಸೀಫ್ ನ ಇಷ್ಟವಿರಲಿಲ್ಲ. ಆರೋಪಿಯು ತೌಸೀಫ್‌ನನ್ನು ಮನೆಗೆ ಕರೆಸಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಆತ ಹಾಗೂ ತನ್ನ ಮಗಳ ಫೋನ್‌ಗಳನ್ನು ಕಸಿದುಕೊಂಡು ಅದರಲ್ಲಿದ್ದ ವೀಡಿಯೋಗಳನ್ನು ತನ್ನ ಫೋನ್‌ಗೆ ವರ್ಗಾಯಿಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ವಾಟ್ಸಾಪ್‌ ಗುಂಪುಗಳಿಗೆ ಆರೋಪಿಯು ರವಾನಿಸಿದ್ದಾನೆ.

ಇದಕ್ಕೆ ಪತ್ನಿ ಆಕ್ಷೇಪಿಸಿದ್ದು, ಆಕೆಗೆ ಮತ್ತು ಪುತ್ರಿಗೆ ಹಲ್ಲೆಯನ್ನೂ ಮಾಡಿದ್ದಾನೆ. ಈ ಕುರಿತಾಗಿ ಪತ್ನಿಯು ಉಡುಪಿ ಸೆನ್‌ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪತ್ನಿಯು ಉಚ್ಚಿಲದ ತನ್ನ ತಾಯಿ ಮನೆಯಲ್ಲಿದ್ದಾಗ ಅಲ್ಲಿಗೂ ಹೋಗಿ ಗಲಾಟೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

You cannot copy content from Baravanige News

Scroll to Top