ಬಂಟಕಲ್‌ ಇಂಜಿನಿಯರಿಂಗ್‌ ಕಾಲೇಜಿಗೆ ಹ್ಯಾಕಥಾನ್‌ನಲ್ಲಿ ಪ್ರಶಸ್ತಿ

ಉಡುಪಿ, ಜು. 15: ಎ.ಜೆ ಇನ್ಸ್ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯ ಐಇಇಇ ವಿದ್ಯಾರ್ಥಿ ಘಟಕವು ಜುಲೈ13 ರಂದು ಆಯೋಜಿಸಿದ್ದ ಸಂಕಲ್ಪಾ 2024( 8 ಗಂಟೆಗಳ ಹ್ಯಾಕಥಾನ್‌) ರಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೂರನೇ ವರ್ಷದ ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌ ಆಂಡ್‌ ಮಶೀನ್‌ ಲರ್ನಿಂಗ್‌ ವಿಭಾಗದ ವಿದ್ಯಾರ್ಥಿಗಳಾದ ಪ್ರಥಮ್‌ ಎಲ್‌ ಕಾಮತ್‌, ರಾಹುಲ್‌ ಮೆಂಡನ್‌, ಅಕ್ಷಯ್‌ ನಾಯಕ್‌ ಭಾಗ ವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಇಂಜಿನಿಯರಿಂಗ್‌ ಕಾಲೇಜಿನ ಒಟ್ಟು 36 ತಂಡಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ , ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

Scroll to Top