ಟೆಲಿಕಾಂ ಕಂಪನಿಗಳಾದ ಏರ್‌ಟೆಲ್ ಮತ್ತು ಜಿಯೋಗಳ ರೀಚಾರ್ಜ್ ಯೋಜನೆ ಹೆಚ್ಚಿಸಿದ ಬೆನ್ನಲ್ಲೇ ಜನರು ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡಿದ್ದಾರೆ. ಏರ್‌ಟೆಲ್ ಮತ್ತು ಜಿಯೋ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಿಕೊಳ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಸಾಕಷ್ಟು ಟ್ರೆಂಡ್ನಲ್ಲಿದೆ. ಸದ್ಯದ ಮಾಹಿತಿ ಪ್ರಕಾರ, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಮತ್ತು ಬಿಎಸ್‌ಎನ್‌ಎಲ್ ನಡುವೆ 15 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ನಡೆದಿದೆ ಎಂಬ ಸುದ್ದಿ ಇದೆ.
TCS ಮತ್ತು BSNL ಒಟ್ಟಾಗಿ ಭಾರತದ 1000 ಹಳ್ಳಿಗಳಲ್ಲಿ 4G ಇಂಟರ್ನೆಟ್ ಸೇವೆ ನೀಡಲಿವೆ. ಆ ಮೂಲಕ ದೇಶದ ಜನರಿಗೆ ಮುಂದಿನ ದಿನಗಳಲ್ಲಿ ಸ್ಪೀಡ್ ಇಂಟರ್ನೆಟ್ ಸೇವೆ ಸಿಗಲಿದೆ ಎನ್ನಲಾಗುತ್ತಿದೆ.
Jio-Airtel ಟೆನ್ಷನ್, ಟೆನ್ಷನ್..!
ಸದ್ಯ 4G ಇಂಟರ್ನೆಟ್ ಸೇವೆಯಲ್ಲಿ ಜಿಯೋ ಮತ್ತು ಏರ್‌ಟೆಲ್ ಪ್ರಾಬಲ್ಯ ಹೊಂದಿವೆ. ಒಂದು ವೇಳೆ BSNL 4G ಇಂಟರ್ನೆಟ್ ಸೇವೆಯನ್ನು ಪರಿಣಾಮಕಾರಿಯಾಗಿ ನೀಡಿದರೆ ಜಿಯೋ ಮತ್ತು ಏರ್‌ಟೆಲ್ ಮಾರ್ಕೆಟ್ ನೆಲ ಕಚ್ಚಲಿದೆ. ಟಾಟಾ ದೇಶದ ನಾಲ್ಕು ಪ್ರದೇಶಗಳಲ್ಲಿ ಮಾತ್ರ ಡೇಟಾ ಕೇಂದ್ರಗಳನ್ನು ಹೊಂದಿದೆ. BSNL ದೇಶದಾದ್ಯಂತ 9000ಕ್ಕೂ ಹೆಚ್ಚು ಪ್ರದೇಶಗಳಲ್ಲಿ 4G ನೆಟ್‌ವರ್ಕ್ ಹೊಂದಿದೆ. ಇದು ಒಂದು ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
Jio-Airtel ರೀಚಾರ್ಜ್ ಹೆಚ್ಚಳ
ಜೂನ್‌ನಲ್ಲಿ ಜಿಯೋ ರೀಚಾರ್ಜ್ ಯೋಜನೆಯನ್ನು ಪರಿಷ್ಕರಣೆ ಮಾಡಿ, ಗ್ರಾಹಕರಿಗೆ ಶಾಕ್ ನೀಡಿತು. ಅದಾದ ಬೆನ್ನಲ್ಲೇ ಏರ್‌ಟೆಲ್, ಜಿಯೋ ಹಾದಿಯನ್ನೇ ಹಿಡಿಯಿತು. ಪರಿಣಾಮ ಜಿಯೋ ಮತ್ತು ಏರ್‌ಟೆಲ್ ರೀಚಾರ್ಜ್ ದರ ಹೆಚ್ಚಾಗಿದೆ. ಜುಲೈ 3 ರಿಂದ ಹೊಸ ಪ್ಲಾನ್ಗಳು ಜಾರಿಗೆ ಬಂದಿವೆ. ಜಿಯೋ ಕಂಪನಿ ಒಮ್ಮಿಂದಲೇ ಶೇಕಡಾ 12 ರಿಂದ 25 ರಷ್ಟು ಬೆಲೆಗಳನ್ನು ಹೆಚ್ಚಿಸಿದೆ. ಏರ್‌ಟೆಲ್ ಶೇಕಡಾ 11 ರಿಂದ 21ಕ್ಕೆ ಹೆಚ್ಚಿಸಿದೆ. Vi 10 ರಿಂದ 21 ರಷ್ಟು ಬೆಲೆಗಳನ್ನು ಹೆಚ್ಚಿಸಿದೆ.