ಟೊಮೆಟೊ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಬ್ಯಾನರ್‌ ಕಟ್ಟಿದ ರೈತ..!!

ಟೊಮೆಟೊ ತೋಟದ ಮೇಲೆ ಯಾರ ವಕ್ರ ದೃಷ್ಟಿಯೂ ಬೀಳಬಾರದು ಅಂತ ದೃಷ್ಟಿ ದೋಷ ನಿವಾರಣೆಗೆ ಚಿಕ್ಕಬಳ್ಳಾಪುರದ ರೈತರೊಬ್ಬರು ವಿಭಿನ್ನ ಐಡಿಯಾ ಮಾಡಿದ್ದಾರೆ.

ಟೊಮೆಟೊ ತೋಟದಲ್ಲಿ ದೃಷ್ಟಿಬೊಂಬೆಗೆ ಬದಲಾಗಿ ನಟಿ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನ್ ಬ್ಯಾನರ್ ಕಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಯುವ ರೈತ ದೀಪಕ್ ಈ ಐಡಿಯಾ ಮಾಡಿದ್ದಾರೆ.

ತಾವು 5 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಇನ್ನೇನು ಕಾಯಿ ಬಿಡುವ ಸಮಯವಿದೆ. ಹೀಗಾಗಿ ಟೊಮೆಟೊ ಬೆಳೆ ಮೇಲೆ ಯಾರ ಕೆಟ್ಟ ಕಣ್ಣು ಬೀಳದಿರಲಿ, ಒಳ್ಳೆಯ ಫಸಲು ಬಂದು ಒಳ್ಳೆ ಲಾಭ ಸಿಗಲಿ ಅನ್ನೋ ಕಾರಣಕ್ಕೆ ದೃಷ್ಟಿ ಬೊಂಬೆ ಬದಲು ನಟಿಯರ ಭಾವಚಿತ್ರದ ಬ್ಯಾನರ್‌ ಅಳವಡಿಸಿದ್ದಾರೆ.

ಸದ್ಯ ಚಿಕ್ಕಬಳ್ಳಾಪುರದಲ್ಲಿ ಟೊಮೆಟೊ ಪ್ರತಿ ಕ್ವಿಂಟಲ್‌ ಸುಮಾರು 3,500 ರೂ.ಗೆ ಮಾರಾಟವಾಗುತ್ತಿದೆ.

You cannot copy content from Baravanige News

Scroll to Top