ಕೆಂಪು ಬದಲು, ಮರೂನ್ ಬಣ್ಣದ ಲಿಪ್‌ಸ್ಟಿಕ್ ತಂದ ಪತಿ; ಡಿವೋರ್ಸ್ಗಾಗಿ ಕೋರ್ಟ್ ಮೆಟ್ಟಿಲೇರಿದ ಪತ್ನಿ

ಉತ್ತರ ಪ್ರದೇಶ: ಕೆಂಪು ಬದಲು, ಪತಿ ಮರೂನ್ ಬಣ್ಣದ ಲಿಪ್‌ಸ್ಟಿಕ್ ತಂದ ಎಂಬ ಕಾರಣಕ್ಕೆ ಕೋಪಗೊಂಡ ಪತ್ನಿ ಕೋರ್ಟ್ ಮೆಟ್ಟಿಲೇರಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

ಮದುವೆಯಾದ ಕೇವಲ 6 ತಿಂಗಳಿಗೆ ಪತಿಯಿಂದ ವಿಚ್ಛೇದನಕ್ಕಾಗಿ ಪತಿ ನಿರ್ಧಾರಕ್ಕೆ ಬಂದಿದ್ದಾಳೆ. ವಿಚ್ಛೇದನಕ್ಕೆ ಕಾರಣವೆನೆಂದು ವಕೀಲರು ಕೇಳಿದಾಗ ಮಹಿಳೆ ಲಿಪ್​​​ಸ್ಟಿಕ್​​ನಿಂದಾದ ಜಗಳವನ್ನು ವಿವರಿಸಿದ್ದಾಳೆ. ಈಕೆಯ ಜಗಳದ ವಿಷಯ ಕೇಳಿ ಕುಟುಂಬ ಸಲಹಾ ಕೇಂದ್ರದ ಸಿಬ್ಬಂದಿ ಶಾಕ್ ಆಗಿದ್ದಾರೆ.

ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರ ಡಾ.ಸತೀಶ್ ಖಿರ್ವಾರ್ ಹೇಳುವಂತೆ ಆಗ್ರಾದ ಯುವತಿಯೊಬ್ಬಳು 6 ತಿಂಗಳ ಹಿಂದೆ ಮಥುರಾದ ಯುವಕನೊಂದಿಗೆ ವಿವಾಹವಾಗಿದ್ದಾಳೆ. ಗಂಡ ದಿನಗೂಲಿ ಕೆಲಸಗಾರ. 20 ದಿನಗಳ ಹಿಂದೆ ಯುವತಿ ಗಂಡನಲ್ಲಿ ಕೆಂಪು ಬಣ್ಣದ ಲಿಪ್ಸ್ಟಿಕ್ ತರಲು ಹೇಳಿದ್ದಾನೆ. ಆದರೆ ಆತ ತಿಳಿಯದೇ ಮರೂನ್​​ ಬಣ್ಣದ ಲಿಪ್ಸ್ಟಿಕ್ ತಂದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ತಂದಿರೋ ಲಿಪ್‌ಸ್ಟಿಕ್ ಬದಲಾಯಿಸಿಕೊಂಡು ಬರುವಂತೆ ಹೇಳಿದ್ದಾಳೆ. ಆದ್ರೆ ಗಂಡ, ಬಣ್ಣದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ. ಅದನ್ನೇ ಬಳಸುವಂತೆ ಹೇಳಿದ್ದಕ್ಕೆ ಕೋಪಗೊಂಡ ಪತ್ನಿ ಡಿವೋರ್ಸ್​​​ ನೀಡಲು ಮುಂದಾಗಿದ್ದಾಳೆ ಎಂದು ಹೇಳಿದ್ದಾರೆ.

ದಂಪತಿಯನ್ನು ಕೂರಿಸಿ ಕೌನ್ಸೆಲಿಂಗ್ ಮಾಡಿದ್ದು, ಕುಟುಂಬ ಸಲಹಾ ಕೇಂದ್ರದ ಸಿಬ್ಬಂದಿ ಇಬ್ಬರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಇಬ್ಬರೂ ಜೊತೆಯಾಗಿ ಹೋಗಿದ್ದಾರೆ ಎಂದು ಡಾ. ಖಿರ್ವಾರ್ ತಿಳಿಸಿದ್ದಾರೆ.

You cannot copy content from Baravanige News

Scroll to Top