ಅಂಕೋಲಾದ ಬಳಿಕ ಶಿರಾಡಿ ಘಾಟ್ನಲ್ಲಿ ಕುಸಿದ ಗುಡ್ಡ.. ಮಣ್ಣಿನಡಿಯಲ್ಲಿ ಓಮ್ನಿ ಕಾರು!

ಹಾಸನ : ಮಳೆಯ ರಣಾರ್ಭಟದಿಂದ ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿದು 5 ಜನರು ಸಾವನ್ನಪ್ಪಿದ್ದಾರೆ. 12ರಿಂದ 15 ಜನರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆಂಬ ಶಂಕೆಯಿದೆ.

ಸದ್ಯ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಈ ಘಟನೆಯ ಬೆನ್ನಲ್ಲೇ ಶಿರಾಡಿ ಘಾಟ್ ರಸ್ತೆಯಲ್ಲಿ ಇಂತಹದೇ ದುರ್ಘಟನೆ ನಡೆದಿದೆ. ಏಕಾಏಕಿ ಮಣ್ಣುಗುಡ್ಡ ಕುಸಿದಿದೆ. ಪರಿಣಾಮ ಮಾರುತಿ ಸುಜುಕಿ ಕಂಪನಿಯ ಓಮಿನಿ ಕಾರು ಮಣ್ಣಿನಲ್ಲಿ ಸಿಲುಕಿಕೊಂಡಿದೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದೆ.

ಸಕಲೇಶಪುರ ತಾಲೂಕಿನ, ಎತ್ತಿನಹಳ್ಳ ಬಳಿ ಮಳೆಯ ಅಬ್ಬರದಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಓಮ್ನಿ ಕಾರು ಮಣ್ಣಿನಡಿ ಸಿಲುಕಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಂದಾಯ ಇಲಾಖೆ ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.

Scroll to Top