ಭಾರೀ ಮಳೆ, ಭೂಕುಸಿತ ಹಿನ್ನೆಲೆ : ಮಂಗಳೂರು – ಮಡಿಕೇರಿ ರಸ್ತೆಯಲ್ಲಿ ವಾಹನ ಸಂಚಾರ ರಾತ್ರಿ ವೇಳೆ ಬಂದ್!

ಮಡಿಕೇರಿ, ಜು. 18: ಭಾರೀ ಮಳೆ, ಭೂಕುಸಿತ ಹಿನ್ನೆಲೆ ಮಂಗಳೂರು – ಮಡಿಕೇರಿ ರಸ್ತೆಯಲ್ಲಿ ವಾಹನ ಸಂಚಾರ ರಾತ್ರಿ ವೇಳೆ ಬಂದ್ ಮಾಡಲಾಗಿದೆ.

ಮಡಿಕೇರಿಯಿಂದ ಸಂಪಾಜೆವರೆಗೆ ಎಲ್ಲಾ ಮಾದರಿ ವಾಹನ ಬಂದ್‌ ಆಗಲಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ.

ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಿತ್ಯ ರಾಜ್ಯ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಜುಲೈ 18 ರ ರಾತ್ರಿ 8 ಗಂಟೆಯಿಂದ ಈ ಆದೇಶ ಜಾರಿ ಬರಲಿದೆ.

ಜುಲೈ 22 ರ ಬೆಳಿಗ್ಗೆ 6 ಗಂಟೆವರೆಗೆ ಜಾರಿಯಲ್ಲಿ ಇರುತ್ತದೆ. ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.

ಮಡಿಕೇರಿ ಸಂಪಾಜೆ ಮಾರ್ಗದ ಕರ್ತೋಜಿ ಗ್ರಾಮ ಬಳಿ ಹೆದ್ದಾರಿ ದುರಸ್ತಿ ಕಾರ್ಯ ನಡೆಯುತ್ತಿದೆ. ಆ ಭಾಗದಲ್ಲಿ ಗುಡ್ಡಕುಸಿತ ಸಾಧ್ಯತೆ ಇದೆ. ಈ ಹಿನ್ನೆಲೆ ರಸ್ತೆಯಲ್ಲಿ ಸಂಚಾರ ಬಂದ್‌ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Scroll to Top